ಜವಾನ್ ಟೀಸರ್‌ನಲ್ಲಿ ಸೌತ್ ಸಿನಿಮಾಗಳ ಛಾಯೆ: ಸೌತ್ ಸ್ಟಾರ್ಸ್ ಗೆಟಪ್‌ಗಳನ್ನ ಕಾಪಿ ಮಾಡಿದ್ರಾ ಶಾರುಖ್ ?
‘ಜವಾನ್’ ಸಿನಿಮಾದ ದಕ್ಷಿಣ ಸಿನಿಮಾಗಳ ಕಾಪಿನಾ..?
ಜವಾನ್ಗೆ ಆಕ್ಷನ್ ಕಟ್ ಹೇಳಿದ್ದಾರೆ ನಿರ್ದೇಶಕ ಅಟ್ಲಿ..!
ಜವಾನ್ನಲ್ಲಿ ಗುಂಡು ಹೊಡೆಸಿಕೊಂಡಿರೋ ಶಾರುಖ್..!
ಶಾರುಖ್ ಖಾನ್ ಅವರು ಅಟ್ಲಿ ಜೊತೆ ಸೇರಿ ಏನೋ ಹೊಸದನ್ನು ಮಾಡಲು ಹೊರಟಿದ್ದಾರೆ ಎಂಬ ಭರವಸೆ ಮೂಡಿದೆ. ಹೀಗಿರುವಾಗಲೇ ಶಾರುಖ್ ಲುಕ್(Sharuk look) ಮೇಲೆ ಕದ್ದ ಆರೋಪ ಎದುರಾಗಿರುವುದು ಮಾತ್ರ ವಿಪರ್ಯಾಸ. ‘ಜವಾನ್’(Jaawan) ಪ್ರಿವ್ಯೂನಲ್ಲಿ ಮಗುವನ್ನು ಎತ್ತಿಕೊಳ್ಳುವ ದೃಶ್ಯವೊಂದು ಬರುತ್ತದೆ. ಇದನ್ನು ಅನೇಕರು ‘ಬಾಹುಬಲಿ 2’ ಚಿತ್ರದಲ್ಲಿ ಬರುವ ದೃಶ್ಯಕ್ಕೆ ಹೋಲಿಕೆ ಮಾಡಿದ್ದಾರೆ. ಶಾರುಖ್ ಖಾನ್ (Shah Rukh Khan) ಅವರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವ ಮಾದರಿಯ ದೃಶ್ಯ ಒಂದು ಬರುತ್ತದೆ. ಇದನ್ನು, ವಿಕ್ರಮ್ ನಟನೆಯ ‘ಅಪರಿಚಿತ್’ ಚಿತ್ರಕ್ಕೆ ಕಂಪ್ಯಾರ್ ಮಾಡಲಾಗಿದೆ. ಶಾರುಖ್ ಖಾನ್ ಅವರು ತಲೆಯ ಮೇಲೆ ಸಂಪೂರ್ಣವಾಗಿ ಕೂದಲು ಇಲ್ಲದೆ ಕಾಣಿಸಿಕೊಳ್ಳುತ್ತಾರೆ. ಇದನ್ನು ‘ಶಿವಾಜಿ’ ಚಿತ್ರದಲ್ಲಿ ಬರುವ ರಜನಿಕಾಂತ್ ಪಾತ್ರಕ್ಕೆ ಹೋಲಿಕೆ ಮಾಡಲಾಗಿದೆ. ಶಾರುಖ್ ಖಾನ್ ಅವರು ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದು, ಇದನ್ನು ‘ಡಾರ್ಕ್ ಮ್ಯಾನ್’ ಚಿತ್ರಕ್ಕೆ ಹೋಲಿಸಲಾಗಿದೆ. ಜವಾನ್ ಪ್ರಿವ್ಯೂ 20 ಗಂಟೆಯಲ್ಲಿ 4 ಕೋಟಿ ಬಾರಿ ವೀಕ್ಷಣೆ ಕಂಡು ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್ ಆಗಿ ಹೊರಹೊಮ್ಮಿದೆ. ಶಾರುಖಾನ್ ಜೊತೆ ನಯನತಾರ , ದೀಪಿಕಾ, ವಿಜಯ್ಸೇತುಪತಿ ಸಹಕಲಾವಿದರಾಗಿ ನಟಿಸಿದ್ದಾರೆ. ತಮಿಳು ನಟ ಅಟ್ಲಿ ಜವಾನ್ ನಿರ್ದೇಶನ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಚಿನ್ನದ ಬಿಸ್ಕೆಟ್‌ನಲ್ಲಿ ಅರಳಿದ ರಾಕಿ ಭಾಯ್: ಚಿನ್ನಕ್ಕೂ ಯಶ್‌ಗೂ ಇದೆ ಕೆಜಿಎಫ್ ನಂಟು..!