ಚಿನ್ನದ ಬಿಸ್ಕೆಟ್‌ನಲ್ಲಿ ಅರಳಿದ ರಾಕಿ ಭಾಯ್: ಚಿನ್ನಕ್ಕೂ ಯಶ್‌ಗೂ ಇದೆ ಕೆಜಿಎಫ್ ನಂಟು..!
ಅಪ್ಪಟ ಅಭಿಮಾನಿಗಳ ಅಪರಂಜಿ ರಾಕಿಂಗ್ ಸ್ಟಾರ್ ಯಶ್!
ಮಲೇಶಿಯಾದಲ್ಲಿ ಸಿಕ್ಕಿದೆ ಕೆಜಿಎಫ್ನಲ್ಲಿದ್ದ ಚಿನ್ನದ ಬಿಸ್ಕೆಟ್!
ಚಿನ್ನದ ಬಿಸ್ಕೇಟ್‌ನಲ್ಲಿ ಅರಳಿದ ಕೆಜಿಎಫ್ ಕಿಂಗ್ ರಾಕಿ..!
ರಾಕಿಂಗ್ ಸ್ಟಾರ್ ಯಶ್ ಡೈ ಹಾರ್ಟ್ ಅಭಿಮಾನಿಗಳ ಅಪ್ಪಟ ಅಪರಂಜಿ. ಕೆಜಿಎಫ್(KGF) ಸಿನಿಮಾ ಬಂದ ಮೇಲೆ ಯಶ್ರನ್ನ ಅವ್ರ ಅಭಿಮಾನಿಗಳು ಚಿನ್ನದ ಸ್ಟಾರ್ ಅಂತಲೂ ಕರೆದಿದ್ದುಂಟು. ಯಾಕಂದ್ರೆ ಕೆಜಿಎಫ್ನಲ್ಲಿ ಹುದುಗಿದ್ದ ಚಿನ್ನವನ್ನ ಹೊರ ತೆಗೆದು ದೊಡ್ಡ ಹಡಗಿನಲ್ಲಿ ಆ ಚಿನ್ನದ ಬಿಸ್ಕೇಟ್(gold biscuit) ಜೊತೆಗೆ ನೀರಿನಲ್ಲಿ ಮುಳುಗಿದ್ದ ರಾಕಿ. ಆದ್ರೆ ಈಗ ಈ ಚಿನ್ನದ ಬಿಸ್ಕೇಟ್ ಮಲೇಶಿಯಾದಲ್ಲಿ ಸಿಕ್ಕಿದೆ. ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್(actor Yash) ಮಲೇಶಿಯಾಕ್ಕೆ(Malaysia) ತೆರಳಿದ್ರು. ತನ್ನ ಅಭಿಮಾನಿಯ ಗೋಲ್ಡ್ ಶಾಪ್ ಒಂದನ್ನ ಇನಾಗ್ರೇಟ್ ಮಾಡಿದ್ರು. ಅದೇ ಚಿನ್ನದ ಅಂಗಡಿಯಲ್ಲಿ ಯಶ್ ಫೋಟೋ ಇರೋ ಚಿನ್ನದ ಬಿಸ್ಕೇಟ್ಅನ್ನ ತಯಾರು ಮಾಡಿದ್ದಾರೆ. ಅದನ್ನ ನೋಡಿ ರಾಕಿ ಅಚ್ಚರಿಗೊಡಿದ್ರು. ಈ ಗೋಲ್ಡನ್ ಬಾರ್‌ಗಳ ಮೇಲೆ ಯಶ್ ಸಹಿ ಹಾಕಿದ್ದಾರೆ. ಈ ಆ ಗೋಲ್ಡ್ ಬಿಸ್ಕೇಟ್‌ಗಳ ಮಲೇಶಿಯಾ ಗೋಲ್ಡ್ ಮಾರ್ಕೆಟ್ಗೆ ಬಂದಿದೆ. ಈ ಗೋಲ್ಡ್ ಬಾರ್ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ರಾಕಿಂಗ್ ಸ್ಟಾರ್ ಯಶ್ರ ಸ್ಟಾರ್ಡಮ್ಗೆ ಹಿಡಿದ ಕೈಗನ್ನಡಿಯಂತೆ ಆಣಿಸ್ತಿವೆ.
ಇದನ್ನೂ ವೀಕ್ಷಿಸಿ: ಸೆಂಚುರಿ ಸ್ಟಾರ್ ಹುಟ್ಟುಹಬ್ಬಕ್ಕೆ ಘೋಸ್ಟ್ ಗಿಫ್ಟ್: ಟೀಸರ್‌ನಲ್ಲಿರುತ್ತೆ ಕಣ್ಣು-ಗನ್ ಮಧ್ಯೆ ಯುದ್ಧ..!