ಬಿಟೌನ್ ಮಂದಿಗೆ ಲವ್ ಸ್ಟೋರಿ ಹೇಳಲಿರೋ ಸ್ಯಾಂಡಲ್‌ವುಡ್ ನಿರ್ದೇಶಕ ಹರಿ ಸಂತು

ಲವ್ ಸ್ಟೋರಿ ಹಾಗೂ ರೊಮ್ಯಾಂಟಿಕ್ ಹಾಡಿಗಳ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದ್ದ ನಿರ್ದೇಶಕ ಹರಿ ಸಂತು ನೇರವಾಗಿ ಬಾಲಿವುಡ್ ನಲ್ಲಿ ಸಿನಿಮಾ ಮಾಡೋ ಅವಕಾಶ ಪಡೆದಿದ್ದಾರೆ. 

First Published Jun 26, 2022, 3:21 PM IST | Last Updated Jun 26, 2022, 4:18 PM IST

ಲವ್ ಸ್ಟೋರಿ ಹಾಗೂ ರೊಮ್ಯಾಂಟಿಕ್ ಹಾಡಿಗಳ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದ್ದ ನಿರ್ದೇಶಕ ಹರಿ ಸಂತು (Hari Santhu) ನೇರವಾಗಿ ಬಾಲಿವುಡ್ ನಲ್ಲಿ ಸಿನಿಮಾ ಮಾಡೋ ಅವಕಾಶ ಪಡೆದಿದ್ದಾರೆ. ಹರಿ ಸಂತು ಬಾಲಿವುಡ್‌ನ ಮೊದಲ ಸಿನಿಮಾಗೂ ಲವ್ ಸ್ಟೋರಿಯನ್ನೇ ಆಯ್ಕೆ ಮಾಡಿಕೊಂಡಿದ್ದು, ಚಿತ್ರಕ್ಕೆ 'ಪಪ್ಪಿ ಲವ್ ' ಅನ್ನೋ ಮುದ್ದಾದ ಟೈಟಲ್ ಇಟ್ಟಿದ್ದಾರೆ. 

ಸಲ್ಲು ಭಾಯ್ 'ನೋ ಎಂಟ್ರಿ'ಗೆ ಸೌತ್ ಸುಂದರಿಯರು, ಸಮಂತಾನಾ? ರಶ್ಮಿಕಾನಾ..?

ವೆಬ್ ಸೀರಿಸ್ ಗಳಿಂದ ಖ್ಯಾತಿ ಗಳಿಸಿರೋ ತನುಜ್ ವಿರ್ವಾನಿ, ತ್ರಿಧಾ ಚೌಧರಿ, ಸಪ್ನಪಬ್ಬಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ. ನಿಕೇತ್ ಪಾಂಡೆ  ಬರವಣಿಗೆ ಚಿತ್ರಕ್ಕಿರಲಿದ್ದು, ರಾಜಾರಾಂ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಭುವನ್ ಮೂವೀಸ್ ಸುರೇಶ್ ಹಾಗೂ ಪದ್ಮಾವತಿ ಪಿಚ್ಚರ್ಸ್ ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಜುಲೈ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದ್ದು, ಯುಕೆ ಲಂಡನ್ ನಲ್ಲೇ ಸಂಪೂರ್ಣ ಚಿತ್ರೀಕರಣ ನಡೆಯಲಿದೆ. ಒಟ್ನಲ್ಲಿ ಇನ್ನು ಮುಂದೆ ಹರಿ ಸಂತು ಬಾಲಿವುಡ್ ನಲ್ಲಿ ಬ್ಯುಸಿ ಆಗಲಿದ್ದಾರೆ.