Dwarakish: ಚಾಮರಾಜಪೇಟೆಯ ಟಿ.ಆರ್‌ ಮಿಲ್‌ನಲ್ಲಿ ನಾಳೆ ದ್ವಾರಕೀಶ್ ಅಂತ್ಯಕ್ರಿಯೆ: ರವೀಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನ

ದಕ್ಷಿಣ ಭಾರತದಲ್ಲಿ ತ್ರಿ ಭಾಷೆಯಲ್ಲಿ ಚಿತ್ರ ನಿರ್ಮಿಸಿದ ನಿರ್ಮಾಪಕ
ವಿದೇಶದಲ್ಲಿ ಮೊದಲು ಕನ್ನಡ ಚಿತ್ರ ನಿರ್ಮಾಣ ಮಾಡಿದ ದ್ವಾರಕೀಶ್
50ನೇ ನಿರ್ಮಾಣದ ಸಿನಿಮಾಗೆ ಹೆಚ್ಚು ತಂತ್ರಜ್ಞರನ್ನು ಬಳಸಿದ್ದ  ಖ್ಯಾತಿ 

First Published Apr 16, 2024, 5:33 PM IST | Last Updated Apr 16, 2024, 5:33 PM IST

ಹಿರಿಯ ನಟ, ನಿರ್ದೇಶಕ ದ್ವಾರಕೀಶ್‌(Dwarakish) ನಿಧನರಾಗಿದ್ದು, ಬೆಂಗಳೂರಿನ(Bengaluru) ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ದ್ವಾರಕೀಶ್ ನಿಧನಕ್ಕೆ ಸ್ಯಾಂಡಲ್‌ವುಡ್‌(Sandalwood) ನಟರು ಕಂಬನಿ ಮಿಡಿದಿದ್ದಾರೆ. ನಟ ಶ್ರೀನಾಥ್‌ ಮಾತನಾಡಿ, ಬದುಕಿನಲ್ಲಿ, ಚಿತ್ರರಂಗದಲ್ಲಿ  ಸಾಕಷ್ಟು ಏಳು ಬೀಳು ಕಂಡವರು. 500 ರೂಪಾಯಿಯಿಂದ 100 ಕೋಟಿವರೆಗೂ ನೋಡಿದ್ದರು. ಪ್ರತಿಯೊಂದನ್ನೂ ದ್ವಾರಕೀಶ್ ಅನುಭವಿಸಿದ್ದಾನೆ. ದ್ವಾರಕೀಶ್  ಜತೆಗೆ ಬೆಳೆದು ಬಂದವರು ನಾವು. ನಾನು ಬಿದ್ದಾಗ ಸಾಕಷ್ಟು ಧೈರ್ಯ ತುಂಬಿದ್ದರು ಎಂದು ಅವರು ಹೇಳಿದರು. ದ್ವಾರಕೀಶ್ ನಿಧನಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಸಹ ಸಂತಾಪ ಸೂಚಿಸಿದ್ದಾರೆ.

ಇದನ್ನೂ ವೀಕ್ಷಿಸಿ:  Crime News: ಅವಳನ್ನ ಕೊಂದವನು ಅವಳ ಮನೆಯಲ್ಲೇ ಇದ್ದ..! ಅನ್ನ ಹಾಕಿದವಳನ್ನೇ ಕೊಂದು ಮುಗಿಸಿದ..!

Video Top Stories