ಹಿರಿಯ ನಟಿ ತಾರಾ ಜನ್ಮದಿನಕ್ಕೆ ಪುತ್ರನಿಂದ 'ಕುಂಬಳಕಾಯಿ' ಗಿಫ್ಟ್!

ಹಿರಿಯ ಕಲಾವಿದೆ ತಾರಾ ಅವರಿಗೆ ಜನ್ಮದಿನ ಸಂಭ್ರಮ/ ಪೌರ ಕಾರ್ಮಿಕರು ಮತ್ತು ರುದ್ರಭೂಮಿಯಲ್ಲಿ ಕೆಲಸ ಮಾಡುವವರೊಂದಿಗೆ ಜನ್ಮದಿನಾಚರಣೆ/ ತಾರಾ ಅವರಿಗೆ ಮುದ್ದಿನ ಮಗನಿಂದ ಮರೆಯಲಾರದ ಗಿಫ್ಟ್

First Published Mar 5, 2020, 4:34 PM IST | Last Updated Mar 5, 2020, 4:39 PM IST

ಬೆಂಗಳೂರು(ಮಾ. 05)  ಸ್ಯಾಂಡಲ್ ವುಡ್ ಹಿರಿಯ ನಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ನಟಿ ತಾರಾ ಅವರಿಗೆ ಜನ್ಮದಿನದ ಸಂಭ್ರಮ. ಪೌರ ಕಾರ್ಮಿಕರು ಮತ್ತು ರುದ್ರಭೂಮಿಯಲ್ಲಿ ಕೆಲಸ ಮಾಡುವವರ ಜತೆ ತಾರಾ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ತೆರೆಗೆ ಶಿವಾರ್ಜುನ, ಚಿರಂಜೀವಿ ಜತೆ ತಾರಾ ಪುತ್ರನ ಆಗಮನ!

ಈ ಜನರೊಂದಿಗೆ ಬೆರೆಯಲು ಸಂತಸವಾಗುತ್ತದೆ.. ಮಗ ಮತ್ತು ಗಂಡ ಸಹ ಗಿಫ್ಟ್ ಕೊಟ್ಟಿದ್ದಾರೆ. ಇಂದು ನನ್ನ ಹುಟ್ಟಿದ ಹಬ್ಬ ಮಾತ್ರ ಅಲ್ಲ ನನ್ನ ತಂದೆ-ತಾಯಿ ಮದುವೆ ಆದ ದಿನ ಎಂದು ಸಂಭ್ರಮ ಹಂಚಿಕೊಂಡರು.