ತೆರೆಗೆ ಶಿವಾರ್ಜುನ, ಚಿರಂಜೀವಿ ಜತೆ ತಾರಾ ಪುತ್ರನ ಆಗಮನ
ಯುವ ಸಾಮ್ರಾಟ್ ಚಿರಂಜಿವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರ ಬಿಡುಗಡೆ ಡೇಟ್ ಫಿಕ್ಸ್/ ಮಾರ್ಚ್ 12ಕ್ಕೆ ತೆರೆಗೆ ಅಪ್ಪಳಿಸಲಿರುವ ಚಿತ್ರ/ ಮೇಘನಾ ರಾಜ್ ಸಹ ಒಂದು ಹಾಡು ಹಾಡಿದ್ದಾರೆ.
ಬೆಂಗಳೂರು[ಮಾ. 02] ಸ್ಯಾಂಡಲ್ ವುಡ್ ಪ್ರಿನ್ಸ್, ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ್ ಚಿತ್ರ ಬಿಡುಗಡೆಯ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈ ಮೂಲಕ ಮಾರ್ಚ್ ಆರಂಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಂತಾಗಿದೆ.
ರಾಜಾದ್ಯಂತ ಇದೇ ಮಾರ್ಚ್ 12 ರಂದು ಶಿವಾರ್ಜುನ್ ಚಿತ್ರ ರಿಲೀಸ್ ಆಗಲಿದೆ. ಚಿತ್ರಕ್ಕೆ ಸಾಧು ಕೋಕಿಲಾ ಪುತ್ರ ಸುರಾಗ್ ಕೋಕಿಲಾ ಸಂಗೀತ ನಿರ್ದೇಶನ ಮಾಡಿರುವುದು ವಿಶೇಷ. ಚಿತ್ರದ ಒಂದು ಹಾಡಿಗೆ ನಟಿ ಮೇಘನಾ ರಾಜ್ ದನಿ ನೀಡಿದ್ದಾರೆ. ಸಂಜಿತ್ ಹೆಗಡೆ ಸ್ವರ ಮಾಧುರ್ಯವೂ ಇದೆ.
ಮೈಕ್ ಹಿಡಿದ ಮೇಘನಾ ರಾಜ್, ಗಂಡನಿಗಾಗಿ ಹಾಡಿದ ಚೆಲುವೆ
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಅಮೃತಾ ಅಭಿನಯದ ಚಿತ್ರ ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ನಟಿ ತಾರಾ ಪುತ್ರ ಶ್ರೀ ಕೃಷ್ಣ ಸಹ ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದಾನೆ. ಮಳೆ ಚಿತ್ರದ ನಿರ್ದೇಶಕ ಶಿವ ತೇಜಸ್ ನಿರ್ದೇಶನದ ಶಿವಾರ್ಜುನ್ ಚಿತ್ರ ಹಲವಾರು ಹೊಸತನದೊಂದಿಗೆ ತೆರೆಗೆ ಬರುತ್ತಿದೆ.
"