ಇಂದು 'ವೇದ' ಸಿನಿಮಾದ 'ಗಿಲ್ಲಕ್ಕೋ ಶಿವ' ಸಾಂಗ್ ರಿಲೀಸ್: ಮಾಸ್ ಹಾಡಿಗೆ ಮಂಗ್ಲಿ ವಾಯ್ಸ್
ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅಭಿನಯದ 'ವೇದ' ಸಿನಿಮಾದ ಹಾಡು ಇಂದು ಸಂಜೆ ರಿಲೀಸ್ ಆಗಲಿದೆ.
ಸೌತ್ ಸಿನಿರಂಗದಲ್ಲಿ 'ವೇದ' ಸಿನಿಮಾ ಪೋಸ್ಟರ್ ಮತ್ತು ಟೀಸರ್ ಮೂಲಕ ಈಗಾಗಲೇ ಅತಿ ದೊಡ್ಡ ಭರವಸೆ ಮೂಡಿಸಿದೆ. ಈ ಸಿನಿಮಾದ ಏಳೇಳು ಬೆಟ್ಟ ದಾಟ್ಕೊಂಡು ಬರ್ತಾವ್ನೆ 'ಗಿಲ್ಲಕ್ಕೋ ಶಿವ' ಅನ್ನುವ ಮಾಸ್ ಹಾಡು ಬಿಡುಗಡೆ ಆಗುತ್ತಿದೆ. ಈ ಹಾಡನ್ನು ಸೌತ್ ಸ್ಟಾರ್ ಸಿಂಗರ್ ಮಂಗ್ಲಿ ಹಾಡಿದ್ದು, ಇಂದು ಸಂಜೆ ಐದು ಗಂಟೆಗೆ ರಿಲೀಸ್ ಆಗ್ತಿದೆ. ವೇದ ಶಿವಣ್ಣರ ಕನಸಿನ ಸಿನಿಮಾ. ಯಾಕಂದ್ರೆ ಈ ಮೂವಿಗೆ ಬಂಡವಾಳ ಹೂಡಿರೋದು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್. ಹಾಗೂ ಸೆಂಚುರಿ ಸ್ಟಾರ್'ನ 125ನೇ ಸಿನಿಮಾ. ಎ. ಹರ್ಷ ನಿರ್ದೇಶನದ ವೇದ ಡಿಸೆಂಬರ್ 23ರಂದು ತೆರೆ ಮೇಲೆ ಕಾಣಲಿದೆ.
ಪ್ರಭಾಸ್‌ನ ಮದುವೆ ಆಗ್ತೀನಿ: ಬಹಿರಂಗವಾಗಿ ಒಪ್ಪಿಕೊಂಡ ಕೃತಿ ಸನೊನ್, ಗಾಸಿಪ್‌ಗೆ ಬ್ರೇಕ್!