ಕ್ರೇಜಿಪುತ್ರನ ರಿಸೆಪ್‌ಷನ್‌ನಲ್ಲಿ ಸ್ಟಾರ್ಸ್ ಸಮಾಗಮ! ಮಿಂಚಿದ ಅಭಿನಯ ಚಕ್ರವರ್ತಿ!

ಸ್ಯಾಂಡಲ್‌ವುಡ್‌ನ ಕನಸುಗಾರ ವಿ.ರವಿಚಂದ್ರನ್‌ಗೆ ದೊಡ್ಡ ಜವಾಬ್ಧಾರಿ ಅಂದ್ರೆ ಒಬ್ಬೊಬ್ಬರೇ ಮಕ್ಕಳನ್ನ ಮದುವೆ ಮಾಡಿ ಹೊಸ ಬಾಳಿಗೆ ಬೀಳ್ಕೊಡೋದು. 2019ರಲ್ಲಿ ಮಗಳ ಮದುವೆ ಮಾಡಿದ್ದ ಕ್ರೇಜಿಸ್ಟಾರ್, ಈಗ ತನ್ನ ಮೊದಲ ಪುತ್ರ ಮನೋರಂಜನ್ ವಿವಾಹ ನೆರವೇರಿಸಿದ್ದಾರೆ. 

First Published Aug 24, 2022, 11:46 AM IST | Last Updated Aug 24, 2022, 11:46 AM IST

ಸ್ಯಾಂಡಲ್‌ವುಡ್‌ನ ಕನಸುಗಾರ ವಿ.ರವಿಚಂದ್ರನ್‌ಗೆ ದೊಡ್ಡ ಜವಾಬ್ಧಾರಿ ಅಂದ್ರೆ ಒಬ್ಬೊಬ್ಬರೇ ಮಕ್ಕಳನ್ನ ಮದುವೆ ಮಾಡಿ ಹೊಸ ಬಾಳಿಗೆ ಬೀಳ್ಕೊಡೋದು. 2019ರಲ್ಲಿ ಮಗಳ ಮದುವೆ ಮಾಡಿದ್ದ ಕ್ರೇಜಿಸ್ಟಾರ್, ಈಗ ತನ್ನ ಮೊದಲ ಪುತ್ರ ಮನೋರಂಜನ್ ವಿವಾಹ ನೆರವೇರಿಸಿದ್ದಾರೆ. ರವಿಚಂದ್ರನ್ ಪತ್ನಿ ಸುಮತಿ ತೋರಿಸಿದ ಹುಡಿಗಿಯನ್ನ ಕೈ ಹಿಡಿದಿರೋ ಮನೋರಂಜನ್ ಸಂಗೀತ ಜೊತೆ ದಾಂಪತ್ಯ ಶುರು ಮಾಡಿದ್ದಾರೆ. ಇವರಿಬ್ಬರ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಕನ್ನಡ ಸ್ಟಾರ್ಸ್ ಸಮಾಗಮ ಆಗಿದೆ. ರವಿಚಂದ್ರನ್ ಪುತ್ರ ಮನೋರಂಜನ್‌ರದ್ದು ಸಂಪ್ರದಾಯಬದ್ಧ ಮದುವೆ. ಅಮ್ಮ ತೋರಿಸಿ ಹುಡುಗಿಗೆ ತಾಳಿ ಕಟ್ಟಿರೋ ಮನು ತುಂಬಾ ಸರಳವಾಗಿ ವಿವಾಹವಾಗಿದ್ದಾರೆ. ಈ ಸರಳ ಮದುವೆ ಆರತಕ್ಷತೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಜಗಮನಿಸಿದ್ದಾರೆ. ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಕಪ್ಪು ಬಣ್ಣದ ಜಾಕೆಟ್ ಧರಿಸಿ ಸಿಕ್ಕಾಪಟ್ಟೆ ಸ್ಟೈಲೀಶ್ ಲುಕ್‌ನಲ್ಲಿ ಕಂಗೊಳಿಸಿದ್ರು. 

ಈ ಕಾರಣಕ್ಕೆ ಮದುವೆಯಾಗಿಲ್ಲ ಎಂದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

ವಿಶೇಷವಾಗಿ ಸಿದ್ಧಪಡಿಸಿದ್ದ ಹೂಗುಚ್ಚವನ್ನ ದಂಪತಿಗಳಿಗೆ ಕೊಟ್ಟು ಶುಭ ಹಾರೈಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಂದ್ರೇನೆ ಅಲ್ಲೊಂದು ವೈಬ್ರೇಷನ್. ರಾಕಿ ಕ್ರೇಜಿ ಪುತ್ರನ ಮದುವೆಗೆ ಎಂಟ್ರಿ ಆಗುತ್ತಿದ್ದಂತೆ ಆರತಕ್ಷತೆಗೆ ಮತ್ತೊಂದು ಕಳೆ ಬಂದಿತ್ತು. ಯಶ್ ತನ್ನ ಧರ್ಮಪತ್ನಿ ರಾಧಿಕಾ ಕೈ ಹಿಡಿದು ಬಂದು ನವ ದಂಪತಿಗಳಿಗೆ ವಿಶ್ ಮಾಡಿದರು. ರವಿಚಂದ್ರನ್ ಆತ್ಮೀಯ ಸ್ನೇಹಿತ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಸುಧಾರಾಣಿ, ಜಗ್ಗೇಶ್ ದಂಪತಿ, ಸಂಸದೆ ನಟಿ ಸುಮಲತಾ ಅಂಬರೀಶ್, ವಸಿಷ್ಠ ಸಿಂಹ, ಸೃಜನ್ ಲೋಕೇಶ್, ಹಿರಿಯ ನಟಿ ಶೃತಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಶ್ರೀಲೀಲಾ ಸೇರಿದಂತೆ ಹಲವು ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳ ರಿಸೆಪ್ಷೆನ್ಗೆ ಬಂದಿದ್ರು. ಸೆಲೆಬ್ರೆಟಿಗಳಿಗೆ ಅಂತಲೇ ಆಯೋಜಿಸಿದ್ದ ಈ ರಿಸೆಪ್ಷನ್ನಲ್ಲಿ ರಾಜಕಾರಣಿಗಳ ರಂಗು ಇತ್ತು. ಸಿ,ಎಂ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ. ಗಾಲಿ ಜನಾರ್ಧನ ರೆಡ್ಡಿ, ಎಸ್,ಎಂ ಕೃಷ್ಣ, ಸಚಿವ ಸುಧಾಕರ್, ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು ಬಂದು ನವ ವಧು-ವರನಿಗೆ ಶುಭಾಷಯ ತಿಳಿಸಿದ್ರು. ಈ ಮೂಲಕ ಮೂರು ದಿನಗಳ ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಗೆ ತೆರೆ ಬಿದ್ದಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment