ರಿಷಬ್ ಶೆಟ್ಟಿಯ 'ಕಾಂತಾರ-2'ಗೆ ಯಾರಾಗ್ತಾರೆ ಸಿಂಗಾರ ಸಿರಿ: ಫೈನಲ್ ಆದ್ರಾ ಹೀರೋಯಿನ್.?
ರಿಷಬ್ ಶೆಟ್ಟಿ 'ಕಾಂತಾರ-2'ಗೆ ಯಾರಾಗ್ತಾರೆ ಸಿಂಗಾರ ಸಿರಿ?
ಕಾಂತಾರ2 ವರ್ಕ್ ಶುರು, ಫೈನಲ್ ಆದ್ರಾ ನಾಯಕಿ..?
ಸೆಪ್ಟೆಂಬರ್‌ನಿಂದ 'ಕಾಂತಾರ2' ಸಿನಿಮಾ ಶೂಟಿಂಗ್.!
ಕಾಂತಾರ 2 ಸಾಹಸಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿರೋ ಶೆಟ್ರು ಈಗ ತನ್ನ ಸಿನಿಮಾದ ನಾಯಕಿ ಆಯ್ಕೆ ಕಸರತ್ತಿನಲ್ಲಿದ್ದಾರೆ. ಕಾಂತಾರ 2 ಸಿನಿಮಾ(Kantara 2) ಪ್ರೀಕ್ವೆಲ್ ಕತೆ ಇರುತ್ತೆ. ಈ ಸಿನಿಮಾದಲ್ಲಿ ಕಾಡು ಬೆಟ್ಟ ಶಿವನ ತಂದೆಯ ಸುತ್ತ ಕಥೆ ಹೆಣೆಯಲಾಗ್ತಿದೆ. ಹೀಗಾಗಿ ಈ ಸಿಂಗಾರ ಸಿರಿ ಸಪ್ತಮಿ ಗೌಡ(Saptami gowda) ಕಾಂತಾರ 2 ಚಿತ್ರದಲ್ಲಿ ಇರೋದಿಲ್ವಂತೆ. ಹಾಗಾದ್ರೆ ಕಾಡು ಬೆಟ್ಟ ಶಿವನ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳೋ ರಿಷಬ್ ಶೆಟ್ಟಿಗೆ(Actor Rishabh Shetty) ನಾಯಕಿ ಯಾರಾಕ್ತಾರೆ..? ಕಾಂತಾರ ಸಿನಿಮಾದಲ್ಲಿ ಕಾಡು ಬೆಟ್ಟದ ಶಿವನ ತಾಯಿ ಕಮಲಾ ಪಾತ್ರದಲ್ಲಿ ಮಾನಸಿ ಸುದೀರ್ ನಟಿಸಿದ್ರಲ್ಲ, ಇದನ್ನ ರಿಷಬ್ ಹೇಗೆ ಮ್ಯಾಚ್ ಮಾಡ್ತಾರೆ ಅಂತ ನಿಮ್ಮಲ್ಲೇ ಪ್ರಶ್ನೆ ಹುಟ್ಟುಬಹುದು. ಆದ್ರೆ ಕಾಂತಾರ 2 ಸಿನಿಮಾದಲ್ಲಿ ಈ ಹೀರೋಯಿನ್ ಸ್ಟೋರಿಯೇ ಟ್ವಿಸ್ಟ್ ಅಂತೆ. ಅದು ಹೇಗೆ ಅನ್ನೋದನ್ನ ಶೆಟ್ರು ಭರ್ಜರಿಯಾಗಿ ಪ್ಲಾನ್ ಮಾಡಿದ್ದಾರಂತೆ. ಆ ಟ್ವಿಸ್ಟ್ ಆ್ಯಂಡ್ ಟರ್ನ್ಗೆ ಸೂಟ್ ಆಗುವಂತಹ ನಾಯಕಿ ಹುಡುಕಾಟದಲ್ಲಿದೆಯಂತೆ ಕಾಂತಾರ2 ಟೀಂ.
ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್‌ನಲ್ಲಿ ಸೃಷ್ಟಿಯಾಗಿದೆ 'ಮಹಾ ಭಾರತ'ದ ಕನಸು..?: ಸ್ಟಾರ್ ನಟರು ಯಾವ ಪಾತ್ರ ಮಾಡಬೇಕು ..?