ಸ್ಯಾಂಡಲ್‌ವುಡ್‌ನಲ್ಲಿ ಸೃಷ್ಟಿಯಾಗಿದೆ 'ಮಹಾ ಭಾರತ'ದ ಕನಸು..?: ಸ್ಟಾರ್ ನಟರು ಯಾವ ಪಾತ್ರ ಮಾಡಬೇಕು ..?
ಕರ್ಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್
ಕೃಷ್ಣನ ರೋಲ್ನಲ್ಲಿ ಬಾದ್ಷಾ ಕಿಚ್ಚ ಸುದೀಪ್
ಭೀಮನ ರೋಲ್ ಮಾಡೋದು ಧ್ರುವ ಸರ್ಜಾ
ದ್ರೋಣಚಾರ್ಯರ ಪಾತ್ರ ಮಾಡಬೇಕು ಶಿವಣ್ಣ
ಭಾರತೀಯ ಚಿತ್ರರಂಗದ ಪರದೆ ಮೇಲೆ ಅದ್ಯಾವಾಗ ಮಹಾ ಭಾರತ(Mahabharata) ತೋರಣ ಕಟ್ಟುತ್ತಾರೋ ಗೊತ್ತಿಲ್ಲ. ಆದ್ರೆ ಈ ಸಿನಿಮಾ ಬರಲಿ ಅನ್ನೋದು ಅದೆಷ್ಟೋ ಕೋಟಿ ಕಣ್ಣುಗಳ ದೊಡ್ಡ ಆಸೆ. ಅದರ ಕಸರತ್ತಿನಲ್ಲೇ ಇಂಡಿಯನ್ ಸಿನಿಮಾ ಜಗತ್ತು ಇದೆ. ಈ ಸಿನಿಮಾ ಮಾಡೋಕೆ ಸಾಧ್ಯ ಆಗೋದು ಜಕ್ಕಣ್ಣ ರಾಜಮೌಳಿಯಿಂದ ಮಾತ್ರ ಸಾಧ್ಯ ಅಂತ ಕೆಲವ್ರು ಹೇಳಿದ್ದಾರೆ. ಅತ್ತ ಕಡೆ ಬಾಲಿವುಡ್(Bollywood) ಮಂದಿ ಆದಾಗ್ಲೆ ಮಹಾ ಭಾರತವನ್ನ ಬಿಗ್ ಸ್ಕ್ರೀನ್ ಮೇಲೆ ತರೋದಕ್ಕೆ ಸ್ಕೆಚ್ ಹಾಕಿದ್ದಾರೆ ಅಂತ ಸುದ್ದಿಯಾಗ್ತಿದೆ. ಇದರ ಮಧ್ಯೆ ನಮ್ ಸ್ಯಾಂಡಲ್ವುಡ್ನಲ್ಲೂ(sandalwood) ಮಹಾ ಭಾರತ ಸೃಷ್ಟಿಯಾಗೋ ದೊಡ್ಡ ಕನಸೊಂದು ಹುಟ್ಟಿದೆ. ಅವರಲ್ಲಿ ಮೊದಲು ಸಿಗೋದೇ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಧ್ರುವ ಸರ್ಜಾ, ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಚಿತಾ ರಾಮ್.ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ಅನೌನ್ಸ್ಗಾಗಿ ಅವ್ರ ಇಡೀ ಅಭಿಮಾನಿ ಸಾಗರ ಕಾಯ್ತಾ ಇದೆ. ಈ ಟೈಂನಲ್ಲಿ ರಾಕಿ ಪೌರಾಣಿಕ ಸಿನಿಮಾದಲ್ಲಿ ಬಂದ್ರೆ ಹೇಗಿರುತ್ತೆ ಅಂತ ಹೇಳೋಕೆ ಮಹಾ ಭಾರತದ ಕರ್ಣನ ರೂಪದಲ್ಲಿ ಪ್ರತ್ಯಕ್ಷ ಆಗಿದ್ದಾರೆ.
ಇದನ್ನೂ ವೀಕ್ಷಿಸಿ: ಎಲ್ಲೆಲ್ಲೂ ಪ್ರವಾಹ ಭೀತಿ..ಎಚ್ಚರ..ಕಟ್ಟೆಚ್ಚರ: ಪ್ರಳಯ ಪ್ರಹಾರಕ್ಕೆ ಅರ್ಧ ಭಾರತವೇ ಕಂಗಾಲು..!