Asianet Suvarna News Asianet Suvarna News

ಕೋಟ್ಯಧಿಪತಿ ಲುಕ್‌ನಲ್ಲಿ ಗಣೇಶನ ಪಕ್ಕ ಕುಳಿತ ಅಪ್ಪು; ಪುನೀತ್ ಮೂರ್ತಿ ವೈರಲ್

ಅಪ್ಪು ಕೋಟ್ಯಾಧಿಪತಿ ಲುಕ್‌ನ ಗಣೇಶ ಮೂರ್ತಿ ವೈರಲ್ ಆಗುತ್ತಿದೆ. ಈ ಮೂರ್ತಿ ನೋಡಿದ್ರೆ ಅಪ್ಪು ನಿಜವಾಗಿಯೂ ಎದುರಿಗೆ ಕೂತಿದ್ದಾರೇನೋ ಅನ್ನೋ ರೀತಿ ಬಾಸವಾಗುತ್ತೆ. ಅದೇ ಸ್ಟೈಲ್, ಅದೇ ನಗು, ಯೆಸ್ ಇದು ಅಪ್ಪುವಿನ ಸ್ಟೈಲಿಷ್ ಲುಕ್ ನಲ್ಲಿರೋ ಮಣ್ಣಿನ ಮೂರ್ತಿ, ಅಂಕೋಲದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪುನೀತ್ ಅಭಿಮಾನಿ ಬಳಗ ದಿನೇಶ್ ದೇವರಾಯ್ ಮೇತ್ರಿ ಅವ್ರಿಂದ ಈ ಮೂರ್ತಿಯನ್ನ ಮಾಡಿಸಿದ್ದಾರೆ.

First Published Aug 31, 2022, 1:29 PM IST | Last Updated Aug 31, 2022, 1:29 PM IST

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೇವರಾಗಿದ್ದಾರೆ. ಗಣೇಶನ ಹಬ್ಬದಲ್ಲಿ ಅಪ್ಪು ದೇವರಾಗಿ ಅಭಿಮಾನಿಗಳ ಮನೆ ಸೇರಿದ್ದಾರೆ. ಹೌದು ಗಣೇಶ್ ಮೂರ್ತಿಯ ಜೊತೆ ಅಪ್ಪು ಮೂರ್ತಿಯನ್ನು ಅಭಿಮಾನಿಗಳು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಗಣೇಶ ಮೂರ್ತಿ ಜೊತೆ ಅಪ್ಪು ಮೂರ್ತಿ ಇರುವುದನ್ನೇ ಅಭಿಮಾನಿಗಳು ಹುಡುಕಿ ಕೊಂಡೊಯ್ಯುತ್ತಿದ್ದಾರೆ. ವಿಶೇಷ ಎಂದರೆ ಅಪ್ಪು ಕೋಟ್ಯಾಧಿಪತಿ ಲುಕ್‌ನ ಗಣೇಶ ಮೂರ್ತಿ ವೈರಲ್ ಆಗುತ್ತಿದೆ. ಈ ಮೂರ್ತಿ ನೋಡಿದ್ರೆ ಅಪ್ಪು ನಿಜವಾಗಿಯೂ ಎದುರಿಗೆ ಕೂತಿದ್ದಾರೇನೋ ಅನ್ನೋ ರೀತಿ ಬಾಸವಾಗುತ್ತೆ. ಅದೇ ಸ್ಟೈಲ್, ಅದೇ ನಗು, ಯೆಸ್ ಇದು ಅಪ್ಪುವಿನ ಸ್ಟೈಲಿಷ್ ಲುಕ್ ನಲ್ಲಿರೋ ಮಣ್ಣಿನ ಮೂರ್ತಿ, ಅಂಕೋಲದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪುನೀತ್ ಅಭಿಮಾನಿ ಬಳಗ ದಿನೇಶ್ ದೇವರಾಯ್ ಮೇತ್ರಿ ಅವ್ರಿಂದ ಈ ಮೂರ್ತಿಯನ್ನ ಮಾಡಿಸಿದ್ದಾರೆ. ದಿನೇಶ್ ದೇವರಾಯ್ ಮೇತ್ರಿ ಕಳೆದ 15 ವರ್ಷದಿಂದ ಗಣೇಶ ಮೂರ್ತಿಯನ್ನ ಮಾಡುತ್ತಾ ಬರ್ತಿದ್ದೆ. ಸುಮಾರು 1 ತಿಂಗಳುಗಳ ಕಾಲ ಸಮಯ ತೆಗೆದುಕೊಂಡು ಪುನೀತ್ ಮೂರ್ತಿಯನ್ನ ಮಾಡಿದ್ದಾರಂತೆ. ಸದ್ಯ ಅಪ್ಪುವಿನ ಈ ಮೂರ್ತಿ ಸಖತ್ ವೈರಲ್ ಆಗ್ತಿದ್ದು ಗಣೇಶನ ಪಕ್ಕ ಅಪ್ಪು ಮೂರ್ತಿಯನ್ನ ಕೂರಿಸಿ ಸಂಭ್ರಮಿಸುತ್ತಿದ್ದಾರೆ ಅಭಿಮಾನಿಗಳು. 

Video Top Stories