ದಕ್ಷಿಣ ಸಿನಿರಂಗದ ಯುವರಾಣಿ ಆಗ್ತಾರಂತೆ ಶ್ರೀಲೀಲಾ: ಕಿಸ್ ಬ್ಯೂಟಿ ಭವಿಷ್ಯ ನುಡಿದ ಜ್ಯೋತಿಷಿ ವೇಣು ಸ್ವಾಮಿ!
ಶ್ರೀಲೀಲಾ ದಕ್ಷಿಣದ ಯುವರಾಣಿ
ಭವಿಷ್ಯ ನುಡಿದ ವೇಣು ಸ್ವಾಮಿ..!
ಕಿಸ್ ಬ್ಯೂಟಿ ಸಿನಿ ಭವಿಷ್ಯ ನೋಡಿ.!
ಯಾರ ಭವಿಷ್ಯಾ ಎಲ್ಲಿ ಹೇಗಿರುತ್ತೆ ಅಂತ ಗೊತ್ತಿರೋದು ಹಣೆ ಬರಹ ಬರೆಯೋ ಆ ಬ್ರಹ್ಮನಿಗೆ ಮಾತ್ರ ಅನ್ನೋ ಮಾತಿದೆ. ಆದ್ರೆ ಬಣ್ಣದ ಜಗತ್ತಿನ ಸ್ಟಾರ್ ಸೆಲೆಬ್ರೆಟಿಗಳ ಸಿನಿ ಭವಿಷ್ಯ(prediction) ಗೊತ್ತಾಗೋದು ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿಗೆ(Venu Swamy) ಮಾತ್ರ ಅನ್ನಿಸುತ್ತೆ. ಯಾಕಂದ್ರೆ ಆಗಾಗ ನಟ ನಟಿಯರ ಭವಿಷ್ಯಾ ಹೇಳಿ ಚಿತ್ರರಂಗದಲ್ಲಿ ಭಾರಿ ಸುದ್ದಿಯಾಗ್ತಾರೆ. ಇದೀಗ ಕನ್ನಡತಿ, ಕಿಸ್ ಬ್ಯೂಟಿ ಶ್ರೀಲೀಲಾ(Srileela) ದಕ್ಷಿಣ ಸಿನಿ ರಂಗದ ಯುವರಾಣಿ ಆಗ್ತಾರೆ ಅಂತ ಭವಿಷ್ಯಾ ನುಡಿದ್ದಾರೆ ಸ್ಟಾರ್ ಜ್ಯೋತಿಷಿ ವೇಣು ಸ್ವಾಮಿ. ನಟಿ ಶ್ರೀಲೀಲಾ ತೆಲುಗು ಚಿತ್ರರಂಗದ ಹೊಸ ಬ್ರ್ಯಾಂಡ್. ಟಾಪ್ ಹೀರೋಗಳ ಸಿನಿಮಾದಲ್ಲಿ ಶ್ರೀಲೀಲಾ ಮಿಂಚುತ್ತಿದ್ದು ತೆಲುಗುನಲ್ಲಿ ಬರೋಬ್ಬರಿ 6 ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಶ್ರೀಲೀಲಾ ಸಿನಿ ಜೀವನ ಚರಿತ್ರೆಯನ್ನ ಈಗ ವೇಣು ಸ್ವಾಮಿ ತೆರೆದಿಟ್ಟಿದ್ದಾರೆ. ಜ್ಯೋತಿಷಿ ವೇಣುಸ್ವಾಮಿ, ಶ್ರೀಲೀಲಾ ಕುಂಡಲಿ ಪರಿಶೀಲಿಸಿದ್ದು, ದಕ್ಷಿಣ ಭಾರತ ಸಿನಿಮಾ ರಂಗವನ್ನ ಆಳುತ್ತಾರೆ ಎಂದಿದ್ದಾರೆ. ಶ್ರೀಲೀಲಾ ಜಾತಕ ಸಾಮಾನ್ಯವಾದದ್ದಲ್ಲ. ಇದು ಅಪರೂಪದ ಜಾತಕ. ವಿದ್ಯೆ, ಹಣ, ಆಸ್ತಿ, ಹೆಸರು ಎಲ್ಲವನ್ನೂ ಪಡೆಯುತ್ತಾರೆ. ಮುಂದಿನ ಆರೇಳು ವರ್ಷ ಶ್ರೀಲೀಲಾ ಕೇವಲ ಯಶಸ್ಸನ್ನಷ್ಟೆ ಪಡೆಯಲ್ಲ. ನಂಬರ್ ಒನ್ ಹೀರೋಯಿನ್ ಕೂಡ ಆಗ್ತಾರೆ ಎಂದಿದ್ದಾರೆ.
ಇದನ್ನೂ ವೀಕ್ಷಿಸಿ: ಬಾಲಿವುಡ್ ತೊರೆದೇ ಬಿಟ್ರಾ ಸಂಜು ಬಾಬಾ: ಸೌತ್ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಅಧಿರಾ..!