Asianet Suvarna News Asianet Suvarna News

Pranayama Movie: ಪ್ರಣಯಂ ಮಧುರಂ ಅಂದ ಸಿನಿ ಪ್ರೇಕ್ಷಕ..! ರಾಜ್ಯದ 150 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್!

ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನ. ಈ ಲವರ್ಸ್ ಡೇ ವಿಶೇಷವಾಗಿ ಕನ್ನಡದಲ್ಲಿ ಲವ್ ಸ್ಟೋರಿಗಳ ಸಾಲು ಸಾಲು ಸಿನಿಮಾಗಳ ರಿಲೀಸ್ ಆಗಿವೆ. ಆದ್ರೆ ಆ ಎಲ್ಲಾ ಸಿನಿಮಾಗಳ ಮಧ್ಯೆ ಪ್ರೇಕ್ಷಕರ ಮನ ಗೆದ್ದಿರೋ ಸಿನಿಮಾ ಪ್ರಣಯಂ. ಬಿಚ್ಚುಗತ್ತಿ ಸಿನಿಮಾ ಖ್ಯಾತಿಯ ರಾಜವರ್ಧನ್ ಹೀರೋ ಆಗಿ ನಟಿಸಿರೋ ಪ್ರಣಯಂ ಸಿನಿಮಾ ರಾಜ್ಯದ 150 ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.

First Published Feb 10, 2024, 11:18 AM IST | Last Updated Feb 10, 2024, 11:19 AM IST

ಬಿಚ್ಚುಗತ್ತಿ ಖ್ಯಾತಿಯ ನಟ ರಾಜವರ್ಧನ್(Rajavardan), ನೈನಾ ಗಂಗೂಲಿ ನಟಿಸಿರುವ, ಮಾಸ್ ಪ್ರೇಮಕಥೆ‌ ಸಿನಿಮಾ ಪ್ರಣಯಂ(Pranayama movie). ಈ ಸಿನಿಮಾದ ಹಾಡು ಟ್ರೈಲರ್ ಹಿಟ್ ಆಗಿತ್ತು. ಹೀಗಾಗಿ ಪ್ರಣಯಂ ನೋಡೋ ಉತ್ಸುಕದಲ್ಲಿದ್ದ ಪ್ರೇಕ್ಷಕರಿಗೆ ಪ್ರಣಯಂ ಭಜರ್ರಿ ಎಂಟರ್ಟೈನ್ಮೆಂಟ್ ಕೊಟ್ಟಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಪ್ರಣಯಂ ಮಧುರಂ ಎನ್ನುತ್ತಿದ್ದಾರೆ. ಪಲ್ಲಕ್ಕಿ, ಪಾರಿಜಾತದಂಥ‌ ನವಿರು ಪ್ರೇಮ ಕಥೆಗಳನ್ನು ನೀಡಿದ ಪರಮೇಶ್ ಅವರ ಬ್ಯಾನರ್ ನಲ್ಲಿ ಮೂಡಿಬಂದಿರುವ  ಇನ್ ಟೆನ್ಸ್ ಲವ್ ಸ್ಟೋರಿ ಪ್ರಣಯಂ ಸಿನಿಮಾ. ಮನಸ್ವಿ ವೆಂಚರ್ಸ್ ಹಾಗೂ ಪಿಟು ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಪರಮೇಶ್ ಅವರೇ ಕಥೆ ಬರೆದು ನಿರ್ಮಿಸಿರುವ ಈ ಚಿತ್ರಕ್ಕೆ ಎಸ್. ದತ್ತಾತ್ರೇಯ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈ ವಾರದಿಂದ ಪ್ರೇಮಿಗಳು ಪ್ರಣಯಂ ಲವ್ ಸ್ಟೋರಿ ನೋಡಿ ಖುಷಿ ಪಡಬಹದು.

ಇದನ್ನೂ ವೀಕ್ಷಿಸಿ: Janaspandana: ವಿಧಾನಸೌಧದ ಅಂಗಳದಲ್ಲಿ ಸಿಎಂ ಜನ ಸ್ಪಂದನ: 12 ಸಾವಿರ ಅರ್ಜಿ, 20 ಸಾವಿರಕ್ಕೂ ಹೆಚ್ಚು ಜನ!

Video Top Stories