ವಿವಾದಿತ ‘ಆದಿಪುರುಷ್’ ಟ್ರೈಲರ್ ಬಿಡುಗಡೆ: ಸಿನಿಪ್ರಿಯರು ಫುಲ್ ಖುಷ್ !
ಜಗತ್ತು ಗೆಲ್ಲೋಕೆ ರೆಡಿ ಟಾಲಿವುಡ್‌ನ ಆದಿಪುರುಷ್
ಪ್ರಭಾಸ್ ನಟನೆಯ ಆದಿಪುರುಷ್ ಟ್ರೈಲರ್ ರಿಲೀಸ್
ಟ್ರೈಲರ್‌ನಿಂದ ದೂರಾಯ್ತಾ ಆದಿಪುರುಷ್ ವಿವಾದ ?
ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಚಿತ್ರತಂಡ ಟೀಸರ್ ಬಿಡುಗಡೆ ಮಾಡುತ್ತಿದ್ದಂತೆ ಸಕತ್ ಟ್ರೋಲ್ಗೆ ಒಳಗಾಗಿತ್ತು. ಆದ್ರೆ ಇದೀಗ ಮೇ. 9 ರಂದು ‘ಆದಿಪುರುಷ್’ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಕೌತುಕ ಹೆಚ್ಚಿಸಲಾಗಿದೆ. ರಾಮಾಯಣವನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಓಂ ರಾವತ್ ಅವರು ನಿರ್ದೇಶನ ಮಾಡಿದ್ದು, ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್, ಆಂಜನೇಯನಾಗಿ ದೇವದತ್ತ ನಾಗೆ, ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಭಾರತದಲ್ಲಿ ಮಾತ್ರವಲ್ಲದೆ 70 ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಿದೆ. ಟ್ರೈಲರ್ ನೋಡಿದ ನೆಟ್ಟಿಗರು ಫಿದಾ ಆಗಿದ್ದು, ಗ್ರಾಫಿಕ್ಸ್ ವರ್ಕ್ ಸಖತ್ ಆಗಿದೆ ಎಂದು ಹೇಳಿದ್ದಾರೆ. ಜೂನ್ 16ರಂದು ಈ ಚಿತ್ರ ಅದ್ದೂರಿಯಾಗಿ ರಿಲೀಸ್ ಆಗಲಿದೆ.
ಇದನ್ನೂ ವೀಕ್ಷಿಸಿ: Cinema Hungama: ನಿರೀಕ್ಷೆ ಮತ್ತು ರಿಯಾಲಿಟಿ ಬಗ್ಗೆ ಯಶ್ ಹೇಳಿದ್ದೇನು ?