ಸೂಪರ್ ಆಗಿದೆ ಶಿವ ಮೆಚ್ಚಿದ ನಮೋ ಭೂತಾತ್ಮ 2 ಹಾಡು: ಮತ್ತೆ ಒಂದಾದ ಮುರುಳಿ ಮಾಸ್ಟರ್ -ಕೋಮಲ್!


ಮತ್ತೆ ಬಂದ 'ನಮೋ ಭೂತಾತ್ಮ' ಕೋಮಲ್..!
'ನಮೋ ಭೂತಾತ್ಮ2' ಸ್ಪೆಷಲ್ ಸಾಂಗ್ ರಿಲೀಸ್!
ಶಿವಣ್ಣನಿಂದ ನಮೋ ಭೂತಾತ್ಮ2 ಸಾಂಗ್ ಬಿಡುಗಡೆ!

First Published Jul 14, 2023, 3:52 PM IST | Last Updated Jul 14, 2023, 3:52 PM IST

ನಮೋ ಭೂತಾತ್ಮ. ಕಾಮಿಡಿ ಕಿಂಗ್ ನಟ ಕೋಮಲ್ (Actor komal) ನಾಯಕನಾಗಿ ನಟಿಸಿದ್ದ ಹಾರರ್ ಥ್ರಿಲ್ಲರ್ ಸಿನಿಮಾ. 2014ರಲ್ಲಿ ಬಂದ ನಮೋ ಭೂತಾತ್ಮ (Namo Bhootham) ಸಿನಿಮಾ ನಟ ಕೋಮಲ್ರ ಹೀರೋ ಬ್ರ್ಯಾಂಡ್ ವ್ಯಾಲ್ಯೂವನ್ನ ಮತ್ತಷ್ಟು ಹೆಚ್ಚಿಸಿತ್ತು. ಇದೀಗ ಇದೇ ನಮೋ ಭೂತಾತ್ಮ ಪಾರ್ಟ್2 ಸಿನಿಮಾ ಬರ್ತಿದೆ. ನಟ ಕೋಮಲ್ ಕುಮಾರ್ ಆಫ್ಟರ್ ಎ ಲಾಂಗ್ ಗ್ಯಾಪ್ನ ನಂತರ ಮತ್ತೊಮ್ಮೆ ಸಿನಿ ಪ್ರೇಕ್ಷಕರಿಗೆ ಹಾರರ್ ಎಂಟರ್ಟೈನ್ಮೆಂಟ್ ಕೊಡುತ್ತಿದ್ದಾರೆ. ಈ ಸಿನಿಮಾದ ಸ್ಪೆಷಲ್ ಸಾಂಗ್(song) ಒಂದು ಈಗ ರಿಲೀಸ್ ಆಗಿದೆ. ನಮೋ ಭೂತಾತ್ಮ2 ಸಿನಿಮಾಗೆ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿರೋ ಮುರುಳಿ ಮಾಸ್ಟರ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಹಿಂದೆ ಬಂದ ನಮೋ ಭೂತಾತ್ಮ ಸಿನಿಮಾಗೂ ಮುರುಳಿ ಮಾಸ್ಟರ್ ಡೈರೆಕ್ಷನ್ ಮಾಡಿದ್ರು. ಈಗ ಮತ್ತೊಮ್ಮೆ ಕೋಮಲ್ ಜೊತೆಯಾಗಿದ್ದು ಈ ಜೋಡಿ ನಮೋ ಭುತಾತ್ಮ2 ಸಿನಿಮಾದಲ್ಲಿ ಕಮಾಲ್ ಮಾಡೋದು ಕನ್ಫರ್ಮ್ ಎನ್ನುತ್ತಿದೆ. ಈ ಸ್ಪೆಷಲ್ ಸಾಂಗ್. ವಿಶೇಷ ಅಂದ್ರೆ ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಡಾಕ್ಟರ್ ಶಿವರಾಜ್ ಕುಮಾರ್ ಈ ಹಾಡನ್ನ ಮೆಚ್ಚಿ ಬಿಡುಗಡೆ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಕರುನಾಡ ಚಕ್ರವರ್ತಿಗೆ ಅಭಿಮಾನಿಗಳ ಸ್ಪೆಷಲ್ ಗಿಫ್ಟ್ : ಮಾರುಕಟ್ಟೆಗೆ ಬಂತು 'ರಾಜವಂಶ' ಸದಸ್ಯರಿರೋ ಗಡಿಯಾರ!