ಕನ್ನಡದಲ್ಲಿ ಹೊಸ ದಾಖಲೆ ಬರೆದ ಕಾಂತಾರ: ಕೆಜಿಎಫ್-2 ರೆಕಾರ್ಡ್ ಬ್ರೇಕ್
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಕೆಜಿಎಫ್ 2 ದಾಖಲೆಯನ್ನು ಬ್ರೇಕ್ ಮಾಡಿದ್ದು, ಈ ಕುರಿತು ನಿರ್ಮಾಪಕರು ಮಾಹಿತಿ ನೀಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಸಿನಿಮಾಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಕಾಂತಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಾಹಿತಿಯನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ಅವರೇ ತಿಳಿಸಿದ್ದಾರೆ. 25 ದಿನಗಳಲ್ಲಿ 77 ಲಕ್ಷ ಜನರು ಕನ್ನಡದಲ್ಲಿ ಸಿನಿಮಾವನ್ನು ನೋಡಿದ್ದು, ಇದು ಅತಿ ಹೆಚ್ಚು ಜನರು ನೋಡಿರುವ ಕನ್ನಡ ಸಿನಿಮಾ ಎನ್ನುವ ಖ್ಯಾತಿಗೂ ಒಳಗಾಗಿದೆ. ಅಷ್ಟೇ ಅಲ್ಲದೆ ಪುನೀತ್ ನಟನೆಯ ರಾಜಕುಮಾರ ಹಾಗೂ ಕೆಜಿಎಫ್ ಸಿನಿಮಾಗಳ ದಾಖಲೆಯನ್ನೇ ಹಿಂದಿಕ್ಕಿದ್ದು, 25 ದಿನಗಳಲ್ಲಿ ಬರೋಬ್ಬರಿ 200 ಕೋಟಿ ರೂ. ಗಳಿಸಿದೆ ಎನ್ನಲಾಗುತ್ತಿದೆ.
ವೀರಗಾಸೆಗೆ ಅವಮಾನ ಮಾಡಿದವರಿಗೆ ಜಯರಾಜ್ ಹೊಡೆದಿದ್ದಾರೆ: ಧನಂಜಯ್ ಸ್ಪಷ್ಟನೆ