Asianet Suvarna News Asianet Suvarna News

ಕೃಷಿಕರಾದ ರಿಚರ್ಡ್ ಆಂಟನಿ, ಬ್ರಹ್ಮಾವರದಲ್ಲಿ ರಕ್ಷಿತ್ ಶೆಟ್ಟಿ ಗದ್ದೆ ನಾಟಿ

* ಗದ್ದೆಗೆ ಇಳಿದು ನಾಟಿ ಮಾಡಿದ ನಟ ರಕ್ಷಿತ್ ಶೆಟ್ಟಿ
* ಶಾಸಕ ರಘುಪತಿ ಭಟ್ ನೇತೃತ್ವದ ಹಡಿಲು ಭೂಮಿ ನಾಟಿ ಯೋಜನೆ
* ಊರಿಗೆ ಮರಳಿ ಯುವಕರು ಕೃಷಿಯಲ್ಲಿ  ತೊಡಗಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ

First Published Jul 18, 2021, 7:43 PM IST | Last Updated Jul 18, 2021, 7:43 PM IST

ಉಡುಪಿ(ಜು. 18)  ನಟ ರಕ್ಷಿತ್ ಶೆಟ್ಟಿ ಗದ್ದೆಗೆ ಇಳಿದಿದ್ದಾರೆ.  ಉಡುಪಿಯ ಬ್ರಹ್ಮಾವರದಲ್ಲಿ ನಟ ರಕ್ಷಿತ್ ನಾಟಿ  ಮಾಡಿದ್ದಾರೆ. ಕೇದಾರೋತ್ಥಾನ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಶಾಸಕ ರಘುಪತಿ ಭಟ್ ನೇತೃತ್ವದ ಹಡಿಲು ಭೂಮಿ ನಾಟಿ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಸೆಲ್ಫಿಗಾಗಿ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ರಘುಪತಿ ಭಟ್ಟರ ಕೃಷಿ ಕ್ರಾಂತಿ... ದೊಡ್ಡ ಬದಲಾವಣೆ

ಕರಾವಳಿ ಜನರ ಮುಖ್ಯ ಉದ್ದಿಮೆ ಕೃಷಿಯಾಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ಬೇಸಾಯ ಆಗುತ್ತಿತ್ತು. ಕಳೆದ ಹತ್ತು ಹದಿನೈದು ವರ್ಷಗಳಿಂದ ಬೇಸಾಯ ಕಡಿಮೆಯಾಗುತ್ತಾ ಬಂದಿದ. ಕರಾವಳಿಯಲ್ಲಿ ಬೇಸಾಯ ಕೃಷಿ ನಿಂತು ಬಿಡುತ್ತಾ ಎಂಬ ಆತಂಕ ಇತ್ತು. ಶಾಸಕ ರಘುಪತಿ ಭಟ್ ಒಂದು ಉತ್ತಮ ಯೋಜನೆ ಹಾಕಿಕೊಂಡಿದ್ದಾರೆ. ಊರು ಬಿಟ್ಟವರು ಮತ್ತೆ ಊರಿಗೆ ವಾಪಸಾಗುತ್ತಿದ್ದಾರೆ. ಯುವಕರು ಮತ್ತೆ ಕೃಷಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಮಾಡುವುದು ಕಷ್ಟ ಅಲ್ಲ. ನಾನು ಈ ಯೋಜನೆಗೆ ಬ್ರಾಂಡ್ ಅಂಬಾಸಿಡರ್ ಆಗಲು ಉತ್ಸುಕನಾಗಿದ್ದೇನೆ. ಸಿನಿಮಾ ಮುಖಾಂತರ ಬೇಸಾಯಕ್ಕೆ ಬೆಂಬಲಿಸಲು ಪ್ರಯತ್ನ ಮಾಡುತ್ತೇನೆ. ಯೋಜನೆಗೆ ನನ್ನಿಂದಾಗುವ ಎಲ್ಲಾ ಸಹಾಯ ಮಾಡುತ್ತೇನೆ ಎಂದು ನಟ ಹೇಳಿದ್ದಾರೆ.

Video Top Stories