ಸಲಾರ್ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಪತ್ರ ಬರೆದಿದ್ದೇಕೆ..? ಅದರಲ್ಲೇನಿದೆ..?
ಹೊಂಬಾಳೆ ಫಿಲ್ಮ್ಸ್ ಸಲಾರ್ ಬಗ್ಗೆ ಪತ್ರ ಬರೆದಿದ್ದೇಕೆ..
ಸಲಾರ್ ರಿಲೀಸ್ ತಿಂಗಳು ಮೊದಲ ಟ್ರೈಲರ್ ದರ್ಶನ.!
ಪ್ರಶಾಂತ್ ನೀಲ್ ಟ್ರೈಲರ್‌ನಲ್ಲಿ ಏನ್ ಕೊಡ್ತಾರೆ..?
ಎರಡು ದಿನಗಳ ಹಿಂದೆ ಬಿಡುಗಡೆಯಾದ 'ಸಲಾರ್' ಟೀಸರ್ (salar teaser) 10 ಕೋಟಿ ವೀವ್ಸ್ ಕಂಡಿದೆ. 'ಸಲಾರ್' ಟೀಸರ್‌ಗೆ ಸಿಕ್ಕ ರೆಸ್ಪಾನ್ಸ್‌ಗೆ ಹೊಂಬಾಳೆ ಟೀಂಗೂ ಖುಷಿ ಕೊಟ್ಟಿದೆ. ಆದ್ರೆ ಪ್ರಭಾಸ್ ಫ್ಯಾನ್ಸ್ ನಿರೀಕ್ಷೆಗೆ ಮಾತ್ರ ಕೊಳ್ಳಿ ಇಟ್ಟಿದೆ. ಯಾಕಂದ್ರೆ ಟೀಸರ್ನಲ್ಲಿ ಸರಿಯಾಗಿ ಪ್ರಭಾಸ್ (Prabhas) ದರ್ಶನ ಆಗಿಲ್ಲ. KGF-2 ಟೀಸರ್‌ಮೀರಿಸುವಂತಹ ಸ್ಯಾಂಪಲ್‌ನಿರೀಕ್ಷೆ ಮಾಡಿದ್ದವರಿಗೆ ಆ ಮಟ್ಟಿಗಿನ ಮಜಾ ಸಿಕ್ಕಿಲ್ಲ. ಅಯ್ಯೋ ಟೀಸರ್‌ನಲ್ಲಂತೂ ನಮ್ಮ ಬಾಸ್ ದರ್ಶನ ಸರಿಯಾಗಾಗಿಲ್ಲ. ಕೊನೆ ಪಕ್ಷ ಟ್ರೈಲರ್ ಯಾವಾಗ ಹೇಳಿ? ಅಲ್ಲಾದ್ರು ನಮ್ ಡಾರ್ಲಿಂಗ್ ಮಿಂಚ್ತಾರಾ ಅಂತ ಪ್ರಭಾಸ್ ಫ್ಯಾನ್ಸ್ ಕೇಳುತ್ತಿದ್ದಾರೆ. ಇದಕ್ಕೆ ನಿರ್ಮಾಣ ಸಂಸ್ಥೆ ಹೊಂಬಾಳೆ ಪ್ರೊಡಕ್ಷನ್ (production company Hombale) ದಿಢೀರ್ ಅಂತ ಪತ್ರ (Letter) ಬರೆದು ಆನ್ಸರ್ ಮಾಡಿದೆ. "ಭಾರತೀಯ ಸಿನಿಮಾದ ಭವ್ಯತೆಯನ್ನು ಸಾರಲಿರುವ ಅತ್ಯಂತ ನಿರೀಕ್ಷಿತ ಚಿತ್ರದ ಟ್ರೈಲರ್ ಅನ್ನು ಬಿಡುಗಡೆಗೊಳಿಸಲು ನಾವು ಸಿದ್ಧರಾಗುತ್ತಿದ್ದೇವೆ. ಆಗಸ್ಟ್ ಕೊನೆಯಲ್ಲಿ ಬಿಡುವು ಮಾಡಿಕೊಳ್ಳಲು ಮರೆಯದಿರಿ. ಅವಿಸ್ಮರಣೀಯ ಅನುಭವ ನೀಡಿ ಪ್ರಪಂಚದಾದ್ಯಂತ ಸದ್ದು ಮಾಡಲಿರುವ ಟ್ರೈಲರ್‌ಗಾಗಿ ನಿರೀಕ್ಷಿಸಿ.. ಕ್ಷಣ ಕ್ಷಣದ ಅಪ್‌ಡೇಟ್‌ಗಾಗಿ ಸದಾ ನಮ್ಮೊಂದಿಗೆ ಜೊತೆಯಾಗಿ ಸಂಪರ್ಕದಲ್ಲಿರಿ. ಮರೆಯಲಾಗದ ಅನುಭವ ನಿಮ್ಮದಾಗಿಸಿಕೊಳ್ಳಲು ತಯಾರಾಗಿ. ಈ ಕುತೂಹಲಭರಿತ ರೋಮಾಂಚನಕಾರಿ ಪಯಣವನ್ನು ನಾವು ಮುಂದುವರಿಸೋಣ. ಚರಿತ್ರೆ ನಿರ್ಮಿಸೋಣ ಹಾಗೂ ಭಾರತೀಯ ಸಿನಿಮಾದ ಸಾಮರ್ಥ್ಯವನ್ನು ಸಂಭ್ರಮಿಸೋಣ" ಎಂದು ಪತ್ರದಲ್ಲಿ ಇದೆ.
ಇದನ್ನೂ ವೀಕ್ಷಿಸಿ: ಹೆಚ್ಚುತ್ತಲೇ ಇದೆ ಲಿಯೋ ಸಿನಿಮಾದ ಹಾಡಿನ ವಿವಾದ: ವಿಜಯ್‌ರನ್ನ ಬಂಧಿಸಲು ಆಗ್ರಹಿಸಿದ ರಾಜೇಶ್ವರಿ ಪ್ರಿಯಾ!