ಹೆಚ್ಚುತ್ತಲೇ ಇದೆ ಲಿಯೋ ಸಿನಿಮಾದ ಹಾಡಿನ ವಿವಾದ: ವಿಜಯ್ರನ್ನ ಬಂಧಿಸಲು ಆಗ್ರಹಿಸಿದ ರಾಜೇಶ್ವರಿ ಪ್ರಿಯಾ!
ಹೆಚ್ಚುತ್ತಲೇ ಇದೆ ಲಿಯೋ ಸಿನಿಮಾದ ಹಾಡಿನ ವಿವಾದ..!
ವಿಜಯ್ರನ್ನ ಬಂಧಿಸಲು ಆಗ್ರಹಿಸಿದ ರಾಜೇಶ್ವರಿ ಪ್ರಿಯಾ!
ಸೌತ್ನಲ್ಲಿ ಹೆಚ್ಚು ಸಂಭಾವನೆ ಪಡೆಯೋ ನಟ ವಿಜಯ್.!
ಲೋಕೇಶ್ ಕನಕರಾಜ್ ನಿರ್ದೇಶನದ ತಮಿಳಿನ 'ಲಿಯೋ' ಸಿನಿಮಾ(Leo Cinema) ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ನಟ ವಿಜಯ್ (Thalapathy Vijay) ಹುಟ್ಟುಹಬ್ಬಕ್ಕೆ ಲಿಯೋ ಸಿನಿಮಾದ 'ನಾ ರೆಡಿ' (Naa Ready) ಅನ್ನೋ ಸಾಂಗ್ ಹೊರ ಬಂದಿತ್ತು. ಸಾಮಾಜಿಕ ಕಾರ್ಯಕರ್ತ ಸೆಲ್ವಂ ಎಂಬುವವರು 'ನಾ ರೆಡಿ' ಹಾಡಿನಲ್ಲಿ ಡ್ರಗ್ಸ್ (Drugs) ವೈಭವೀಕರಣ ಹಾಗೂ ರೌಡಿಸಂ ಹೊಗಳಲಾಗಿದೆ. ಹಾಗಾಗಿ ಚಿತ್ರತಂಡದ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯಿದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ದೂರು ದಾಖಲಿಸಿದ್ರು. ಈ ಹಾಡಿನ ಬಗ್ಗೆ 'ಆಲ್‌ಪೀಪಲ್ಸ್ ಪೊಲಿಟಿಕಲ್ ಪಾರ್ಟಿ' ನಾಯಕಿ ರಾಜೇಶ್ವರಿ ಪ್ರಿಯಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ರು. ಇದನ್ನ ನೋಡಿದ್ದ ವಿಜಯ್ ಫ್ಯಾನ್ಸ್ ಕೆಂಡಾಮಂಡವಲಾಗಿ ರಾಜಕಾರಣಿ ರಾಜೇಶ್ವರಿ ಪ್ರಿಯಾರನ್ನ ಹಿಗ್ಗಾಮುಕ್ಕ ಟ್ರೋಲ್ ಮಾಡಿದ್ರು. ಈಗ ಅಭಿಮಾನಿಗಳ ಈ ಅಸಭ್ಯ ವರ್ತನೆಗೆ ವಿಜಯ್ ಅವರೇ ಕಾರಣ.ಒಬ್ಬ ಮಹಿಳೆ ಬಗ್ಗೆ ಅಸಭ್ಯವಾಗಿ ಮಾತನಾಡುವಂತೆ ತಮ್ಮ ಅಭಿಮಾನಿಗಳನ್ನು ಪ್ರೇರಿಪಿಸಿದ ನಟ ವಿಜಯ್‌ರನ್ನ ಬಂಧಿಸಬೇಕು ಅಂತ ರಾಜೇಶ್ವರಿ ಪ್ರಿಯಾ ಆಗ್ರಹಿಸಿದ್ದಾರೆ. ಆದ್ರೆ ರಾಜಕಾರಣಿ ರಾಜೇಶ್ವರಿ ಪ್ರಿಯಾಗೆ ದಳಪತಿ ವಿಜಯ್ ಅಭಿಮಾನಿಗಳ ಕಾಟ ಮಾತ್ರ ತಪ್ಪಿಲ್ಲ.
ಇದನ್ನೂ ವೀಕ್ಷಿಸಿ: ಕೆರಾಡಿ ಕಾಡಿನ ಮಳೆಯಲ್ಲಿ ಕಾಂತಾರ-2 ಶೂಟಿಂಗ್: ಲೊಕೇಶನ್ ಹಂಟಿಂಗ್‌ನಲ್ಲಿ ರಿಷಬ್ ಫುಲ್ ಬ್ಯುಸಿ.!