Asianet Suvarna News Asianet Suvarna News

ಡಾಲಿ ಧನಂಜಯ್‌ಗೆ ಜನ್ಮದಿನದ ಸಂಭ್ರಮ: ಹುಟ್ಟು ಹಬ್ಬದ ಉಡುಗೊರೆಯಾಗಿ ಸಿಕ್ತು ರೌಡಿ ಸಾಂಗ್!

ಸ್ಯಾಂಡಲ್‌ವುಡ್‌ನಲ್ಲಿ ಈಗ ಡಾಲಿಯದ್ದೇ ಹವಾ.. ಹೀರೋ ರೋಲ್ ಆಗಿರಲಿ, ವಿಲನ್ ಪಾತ್ರವಾಗಿರಲಿ ಡಾಲಿ ಇದ್ದಲ್ಲಿ ಭರ್ಜರಿ ಪರ್ಫಾಮೆನ್ಸ್‌ಗೇನು ಕೊರತೆ ಇರೋಲ್ಲ. ಡಾಲಿ ಪರ್ಫಾಮೆನ್ಸ್‌ನಿಂದಲೇ ಸಿನಿಮಾಗಳು ಗೆದ್ದಿರೋ ಉದಾಹರಣೆಯೂ ಇದೆ.

First Published Aug 24, 2022, 12:18 PM IST | Last Updated Aug 24, 2022, 12:18 PM IST

ಸ್ಯಾಂಡಲ್‌ವುಡ್‌ನಲ್ಲಿ ಈಗ ಡಾಲಿಯದ್ದೇ ಹವಾ.. ಹೀರೋ ರೋಲ್ ಆಗಿರಲಿ, ವಿಲನ್ ಪಾತ್ರವಾಗಿರಲಿ ಡಾಲಿ ಇದ್ದಲ್ಲಿ ಭರ್ಜರಿ ಪರ್ಫಾಮೆನ್ಸ್‌ಗೇನು ಕೊರತೆ ಇರೋಲ್ಲ. ಡಾಲಿ ಪರ್ಫಾಮೆನ್ಸ್‌ನಿಂದಲೇ ಸಿನಿಮಾಗಳು ಗೆದ್ದಿರೋ ಉದಾಹರಣೆಯೂ ಇದೆ. ಹೀಗಾಗಿ ಧನಂಜಯ್‌ಗೆ ನಟರಾಕ್ಷಸ ಅಂತ ಕರೆಯೋದು. ಈ ನಟ ರಾಕ್ಷಸನಿಗೆ ಆಗಸ್ಟ್ 23ಕ್ಕೆ ಜನ್ಮದಿನ. ಈ ಜನ್ಮದಿವನ್ನ ಚಂದಗಾಣಿಸಲು ಡಾಲಿಯ ರೌಡಿ ಸಾಂಗ್ ಹೊರ ಬಂದಿದೆ. ಈ ಹಾಡು ಡಾಲಿ ಧನಂಜಯ್ ಲೀಡ್ ರೋನ್‌ನಲ್ಲಿ ನಟಿಸುತ್ತಿರೋ ಹೆಡ್ಬುಷ್ ಸಿನಿಮಾದ ಸಾಂಗ್. ಡಾಲಿಯ ಹುಟ್ಟುಹಬ್ಬದ ಸಂಭ್ರಮ ಹೆಚ್ಚಿಸಲು 'ಹೆಡ್‌ಬುಷ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. 'ನಾವು ರೌಡಿಗಳು' ಎಂದು ಶುರುವಾಗುವ ರೌಡೀಸ್ ಆಂಥೆಮ್‌'ನಂತಿರೋ ಈ ಹಾಡು ಬೆಂಗಳೂರು ಭೂಗತ ಲೋಕದ ಹಳೆ ದಿನಗಳ ದರ್ಶನ ಮಾಡಿಸುವಂತಿದೆ. 

ನಾನು ಅಪ್ಪು ಸರ್‌ ದೊಡ್ಡ ಅಭಿಮಾನಿ, ಅವ್ರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಭಾಗ್ಯ: ಡಾರ್ಲಿಂಗ್ ಕೃಷ್ಣ

ಚರಣ್ ರಾಜ್‌ ಮ್ಯೂಸಿಕ್‌ನ ಹಾಡಿಗೆ 'ರೌಡಿಗಳು ನಾವು ರೌಡಿಗಳು' ಅಂತ ಅಗ್ನಿ ಶ್ರೀಧರ್ ಸಾಹಿತ್ಯ ಬರೆದಿದ್ದಾರೆ. ಹೆಡ್ಬುಷ್ ಸಿನಿಮಾವನ್ನ ಡಾಲಿ ಧನಂಜಯ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಶೂನ್ಯ ಆಕ್ಷನ್ ಕಟ್ ಹೇಳುತ್ತಿರೋ ಸಿನಿಮಾದಲ್ಲಿ ಧನಂಜಯ್ ಡಾನ್ ಜಯರಾಜ್ ಪಾತ್ರ ಮಾಡುತ್ತಿದ್ದಾರೆ. ಆಗಿನ ಕಾಲದಲ್ಲಿ ಜಯರಾಜ್ ಜೊತೆ ಇದ್ದ ಗಂಗ ಪಾತ್ರದಲ್ಲಿ ಈಗ ಲೂಸ್ ಮಾದ ಯೋಗಿ ನಟಿಸುತ್ತಿದ್ದಾರೆ. ಧನಂಜಯ್ 'ಜಯನಗರ 4th ಬ್ಲಾಕ್' ಶಾರ್ಟ್ ಮೂವಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು. ಅಂದು ಧನಂಜಯ್‌ರನ್ನ ನಂಬಿ ಬಂಡವಾಳ ಹೂಡೋಕೆ ನಿರ್ಮಾಪಕರು ಮುಂದೆ ಬರುತ್ತಿರಲಿಲ್ಲ. ಆದರೆ ಈಗ ಧನಂಜಯ್ ಕೈಲಿ ಒಟ್ಟು 7 ಸಿನಿಮಾಗಳಿವೆ. ಹೆಡ್ಬುಷ್ ಸಿನಿಮಾದ ಜೊತೆ ಹೊಸ್ಸಳ ಚಿತ್ರ, ಉತ್ತರ ಕಾಂಡ, ಮಾನ್ಸೂನ್ ರಾಗ, ತೋತಾಪುರಿ, ಪುಷ್ಪ-2, ಜಮಾಲಿ ಗುಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಡಾಲಿ ಜನ್ಮದಿನ ಹಿನ್ನೆಲೆ ಉತ್ತರ ಕಾಂಡ, ಹಾಗು ಹೊಸ್ಸಳ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories