ಸೆಂಚುರಿ ಸ್ಟಾರ್ ಹುಟ್ಟುಹಬ್ಬಕ್ಕೆ ಘೋಸ್ಟ್ ಗಿಫ್ಟ್: ಟೀಸರ್‌ನಲ್ಲಿರುತ್ತೆ ಕಣ್ಣು-ಗನ್ ಮಧ್ಯೆ ಯುದ್ಧ..!

ಬಿಗ್ ಡ್ಯಾಡಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಭಾರಿ ತಯಾರಿ..!
ಸೆಂಚುರಿ ಸ್ಟಾರ್ ಸೆಲೆಬ್ರೇಷನ್ಗೆ ದೊಡ್ಮನೆ ಫ್ಯಾನ್ಸ್ ಫುಲ್ ರೆಡಿ..!
ನಾಗವಾರದಲ್ಲಿ ಶಿವಣ್ಣನ ಅಭಿಮಾನಿಗಳ ಹೂಮಳೆ..!

First Published Jul 12, 2023, 2:44 PM IST | Last Updated Jul 12, 2023, 2:46 PM IST

ಈ ಭಾರಿ ಶಿವರಾಜ್‌ ಕುಮಾರ್‌ (Shivarajkumar) ಜನ್ಮದಿನಕ್ಕೆ ( birthday) ಬಿಗ್ ಸರ್ಪ್ರೈಸ್ಗಳ ಸುರಿಮಳೆ ಕಾದಿದೆ. ಆ ಎಲ್ಲಾ ಸ್ಪೆಷಲ್ ಟ್ರೀಟ್ನಲ್ಲಿ ಮುಖ್ಯವಾದದ್ದು ಘೋಸ್ಟ್ (Ghost)ಗಿಫ್ಟ್. ಜುಲೈ 12ರಂದು ಘೊಸ್ಟ್ ಸಿನಿಮಾದ ಬಿಗ್ಡ್ಯಾಡಿ ಟೀಸರ್ ರಿಲೀಸ್ ಆಗ್ತಿದೆ. ಈ ಟೀಸರ್ ಯಾವ್ ಮಟ್ಟಕ್ಕಿರುತ್ತೆ ಅಂದ್ರೆ ಕಣ್ಣು ಮತ್ತು ಗನ್ ಮಧ್ಯೆ ನಡೆಯೋ ಯುದ್ಧವಂತೆ. ಇಲ್ಲಿ ಕಣ್ಣು ಯಾರದ್ದು ಗನ್ ಯಾರದ್ದು ಅನ್ನೋದೆ ಇಂಟ್ರೆಸ್ಟಿಂಗ್.ಇದರ ಜೊತೆಗೆ ರಜನಿಕಾಂತ್ ಜೊತೆ ನಟಿಸಿರೋ ಜೈಲರ್ ಸಿನಿಮಾ ಫಸ್ಟ್ ಲುಕ್, ಧನುಷ್ ಜೊತೆ ಅಭಿನಯಿಸಿರೋ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಲುಕ್ ಹಾಗೂ ಶಿವಣ್ಣನ ಹೋಂ ಪ್ರೊಡಕ್ಷನ್ನಲ್ಲಿ ಸಿದ್ಧವಾಗ್ತಿರೋ ಭೈರತಿ ರಣಗಲ್ ಸಿನಿಮಾದ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಆಗ್ತಿದೆಯಂತೆ. ಶಿವರಾಜ್ ಕುಮಾರ್ ತಮ್ಮ ಜನ್ಮದಿನದಂದು ಎಷ್ಟು ಬ್ಯುಸಿಯಾಗಿರ್ತಾರೆ.? ಏನೆಲ್ಲಾ ಮಾಡ್ತಾರೆ. ಎಲ್ಲಿ ಹೋಗ್ತಾರೆ ಗೊತ್ತಾ.? ಅದಕ್ಕಾಗಿ ಬ್ಲ್ಯೂ ಪ್ರಿಂಟ್ ಕೂಡ ರೆಡಿಯಾಗಿದೆ. 

ಇದನ್ನೂ ವೀಕ್ಷಿಸಿ: ರಾಜ್ಯ ರಾಜಧಾನಿಯಲ್ಲಿ ಡಬಲ್ ಮರ್ಡರ್: ಬ್ಯುಸಿನೆಸ್‌ಗೆ ಅಡ್ಡಿ ಆಗಿದ್ದಕ್ಕೆ ನಡೆಯಿತಾ ಭೀಕರ ಹತ್ಯೆ..!