Asianet Suvarna News Asianet Suvarna News

ಬಾಲಿವುಡ್ ಡ್ಯಾನ್ಸರ್ ಬಾಯಿಂದ ಹೊರಬಿತ್ತು ಕನ್ನಡದ ಟಾಪ್ ನಿರೂಪಕಿ ಅನುಶ್ರೀ ಹೆಸರು

Sep 8, 2021, 1:13 PM IST

ಕರಾವಳಿ ಡ್ರಗ್ಸ್ ಕೇಸ್ ವಿಚಾರವಾಗಿ ಪೊಲೀಸರು ಬಾಲಿವುಡ್ ಕೊರಿಯೋಗ್ರಫರ್, ಡ್ಯಾನ್ಸರ್ ಸೆಲೆಬ್ರಿಟಿ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದು, ಈತ ಮತ್ತಿಬ್ಬರು ಸೆಲೆಬ್ರಿಟಿಗಳ ಹೆಸರು ಬಾಯ್ಬಿಟ್ಟಿದ್ದಾನೆ. ಹಿಂದಿಯ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಫೇಮಸ್ ಆದ ಕಿಶೋರ್ ಸಿನಿಮಾದಲ್ಲಿಯೂ ನಟಿಸಿದ್ದಾನೆ. ಅಂದ ಹಾಗೆ ಕನ್ನಡದ ಟಾಪ್ ನಿರೂಪಕಿಯ ಹೆಸರು ಬಾಯ್ಬಿಟ್ಟಿದ್ದೂ ಈತನೇ.

ನಿರೂಪಕಿ ಅನುಶ್ರೀಗೆ ಮತ್ತೆ ಸಂಕಷ್ಟ: ಡ್ರಗ್ಸ್ ತಗೊಂಡಿದ್ದು ಕನ್ಫರ್ಮ್?

ಇಷ್ಟೇ ಅಲ್ಲದೆ ಡ್ರಗ್ಸ್ ವಿಚಾರವಾಗಿ ಅರೆಸ್ಟ್ ಆದ ಕಿಶೋರ್ ಇನ್ನೊಬ್ಬ ಪಾಪ್ಯುಲರ್ ಕೊರಿಯೋಗ್ರಫರ್ ತರುಣ್ ಹೆಸರನ್ನು ಬಹಿರಂಗಪಡಿಸಿದ್ದಾನೆ. ಇವರಿಬ್ಬರ ಮೊಬೈಲ್ ಪರಿಶೀಲನೆ, ವಿಚಾರಣೆ ಮೂಲಕ ಅನುಶ್ರೀ ಹೆಸರು ಹೊರಬಂದಿದ್ದು, ನಿರೂಪಕಿ ವಿರುದ್ಧ ಸಾಕ್ಷಿಯೂ ಸಿಕ್ಕಿದೆ.