Renukaswamy murder case: ಐ ವಿಟ್ನೆಸ್‌ಗಳಿಗೆ ಇದೆಯಂತೆ ಜೀವ ಭಯ..! ಸಾಕ್ಷ್ಯ ನಾಶಕ್ಕಾಗಿ ಏನೆಲ್ಲಾ ನಡೆಯುತ್ತಿದೆ ಗೊತ್ತಾ..?
ದರ್ಶನ್ & ಗ್ಯಾಂಗ್‌ನಿಂದ ಜೈಲಿನಲ್ಲಿ ಏನು ನಡೆಯುತ್ತಿದೆ..?
ಜೈಲಿನಿಂದಲೇ ಸಾಕ್ಷಿ ನಾಶಕ್ಕೆ ಯತ್ನಿಸುತಿದ್ಯಾ ಡಿ ಗ್ಯಾಂಗ್..?
ಸತ್ಯ ಒಪ್ಪಿಕೊಂಡ ಆರೋಪಿಗಳಿಗೆ ಜೈಲಲ್ಲೇ ಜೀವ ಭಯ..?
ದರ್ಶನ್ (Darshan) ಮತ್ತು ಅವನ ಪಟಾಲಂ ಪರಪ್ಪನ ಅಗ್ರಹಾರ(Parappana agrahara jail) ಸೇರಿದ್ದಾಯ್ತು. ಎಲ್ಲ 17 ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸತ್ಯ ಒಪ್ಪಿಕೊಂಡ ಆ ಮೂವರು ಆರೋಪಿಗಳಿಗೆ ಜೈಲಿನಲ್ಲೇ ಕೊಲೆ(Murder) ಬೆದರಿಕೆ ಇದೆಯಂತೆ. ಜೈಲಿನಲ್ಲಿದ್ದುಕೊಂಡೇ ದರ್ಶನ್ ಮತ್ತವನ ತಂಡದವರಿಂದ ಸಾಕ್ಷಿಗಳ ನಾಶಕ್ಕೆ ಪ್ರಯತ್ನ ನಡೆಯುತ್ತಿದೆಯಂತೆ. ಜೈಲಲ್ಲಿ ಇರುವಷ್ಟು ದಿನಗಳ ಕಾಲ ತೆಪ್ಪಗೆ ಇದ್ದ ದರ್ಶನ್ ಅಲಿಯಾಸ್ ಡಿ ಬಾಸ್ ಜೈಲಿಗೆ ಹೋಗುತ್ತಿದ್ದಂತೆ ಮತ್ತೆ ತನ್ನ ಹುಚ್ಚಾಟ ಆರಂಭಿಸಿದ್ದಾನೆಂದು ಹೇಳಲಾಗುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ(Renukaswamy murder case), ಎಲ್ಲ 17 ಆರೋಪಿಗಳು ಈಗ ಜೈಲು ಪಾಲಾಗಿದ್ದಾರೆ. ಮುಂದಿನ 14 ದಿನಗಳ ಕಾಲ ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಅಂದ್ರೆ ಮುಂದಿನ ತಿಂಗಳು ಜುಲೈ 4ರವರೆಗೂ ಈ ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬಿಸಿ ಬಿಸಿ ಮುದ್ದೆ ಮುರಿಯಲಿದ್ದಾರೆ.
ಇದನ್ನೂ ವೀಕ್ಷಿಸಿ: ದರ್ಶನ್ ನಡವಳಿಕೆಗೆ ಛೀಮಾರಿ ಹಾಕಿದ ಗುರು! ಪವಿತ್ರಾ ಅನ್ನೋ ಶನಿ ಹಿಂದೆ ಹೋಗಿದ್ದಕ್ಕೆ ಈ ಗತಿ-ಅಡ್ಡಂಡ ಕಾರ್ಯಪ್ಪ