Asianet Suvarna News Asianet Suvarna News

James 2022: ಅಪ್ಪು ಕೊನೆ ಚಿತ್ರದ ಪ್ರೀ-ರಿಲೀಸ್​ ಇವೆಂಟ್‌ಗೆ ಕೌಂಟ್‌ಡೌನ್: ಹೇಗಿದೆ ಗೊತ್ತಾ ಸಿದ್ಧತೆ?

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' (James) ಚಿತ್ರದ ಪ್ರೀ-ರಿಲೀಸ್​ ಇವೆಂಟ್ ಕಾರ್ಯಕ್ರಮ ಇಂದು ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ ರಾತ್ರಿ 7ಗಂಟೆಗೆ ಅದ್ದೂರಿಯಾಗಿ ನಡೆಯಲಿದೆ.

First Published Mar 13, 2022, 1:32 PM IST | Last Updated Mar 13, 2022, 1:32 PM IST

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ 'ಜೇಮ್ಸ್' (James) ಚಿತ್ರದ ಪ್ರೀ-ರಿಲೀಸ್​ ಇವೆಂಟ್​ (James Pre-Release Event) ಕಾರ್ಯಕ್ರಮ ಇಂದು ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ (Palace Ground) ರಾತ್ರಿ 7ಗಂಟೆಗೆ ಅದ್ದೂರಿಯಾಗಿ ನಡೆಯಲಿದೆ. ಈ ವೇಳೆ ಅಪ್ಪು ಅಭಿಮಾನಿಗಳಿಗಾಗಿ 2500 ಪಾಸ್‌ಗಳನ್ನು ಹಂಚಲಾಗಿದ್ದು, ಒಂದು ಪಾಸ್‌ನಲ್ಲಿ ಇಬ್ಬರು ಬರಲು ಅವಕಾಶವಿದೆ. 100/40 ಅಳತೆಯ ಬೃಹತ್ ವೇದಿಕೆ ಸಿದ್ದವಾಗಿದ್ದು, ದೊಡ್ಡ ಎಲ್‌ಇಡಿಯ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ.

James 2022: ಅಪ್ಪು ಚಿತ್ರದ ಜಾತ್ರೆಗೆ ಜೋಶ್ ತುಂಬಿದ ಸಲಾಂ ಸೋಲ್ಜರ್ ಸಾಂಗ್!

5000ಕ್ಕೂ ಹೆಚ್ಚು ಅಭಿಮಾನಿಗಳು ಅರಮನೆ ಮೈದಾನದಲ್ಲಿ ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ 18 ಎಲ್‌ಇಡಿಯ ಸ್ಕ್ರೀನ್ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಅಪ್ಪು ಪತ್ನಿ ಅಶ್ವಿನಿ (Ashwini Puneeth Rajkumar), ಪುನೀತ್​ ಸಹೋದರರಾದ ಶಿವರಾಜ್​ಕುಮಾರ್ (Shivarajkumar) ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಸೇರಿದಂತೆ ದೊಡ್ಮನೆ ಬಳಗ ಹಾಗೂ ನಟ ಉಪೇಂದ್ರ, ಶ್ರೀಮುರಳಿ ಭಾಗವಹಿಸುತ್ತಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies