ರಶ್ಮಿಕಾ, ಬೆಲ್ಲಂಕೊಂಡ ಶ್ರೀನಿವಾಸ್ ನಡುವಿನ ಸಂಬಂಭ ಏನು: ಈ ಬಗ್ಗೆ ನಟ ಹೇಳಿದ್ದೇನು ?


ರಶ್ಮಿಕಾ-ಬೆಲ್ಲಂಕೊಂಡ ಸಂಬಂಧ ನಿಜವಾಗ್ಲೂ ಏನು?
ರಶ್ಮಿಕಾ ಲವ್ ಒಪ್ಪಿಕೊಂಡ್ರಾ ಬೆಲ್ಲಂಕೊಂಡ ?
ತೆಲುಗು ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಡೇಟಿಂಗ್?
 

First Published May 7, 2023, 4:55 PM IST | Last Updated May 7, 2023, 4:55 PM IST

ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಬ್ರೇಕಪ್ ಮಾಡ್ಕೊಂಡ್ರಾ? ಇದೇನಿದು ಮತ್ತೊಬ್ಬ ತೆಲುಗು ನಟನ ಜೊತೆ ತಿರುಗಾಡ್ತಿದ್ದಾರೆ ಅಂತ ಫುಲ್ ಗಾಸಿಪ್ ಹಬ್ಬಿತ್ತು. ಬ್ಯಾಕ್ ಟು ಬ್ಯಾಕ್ ಇಬ್ಬರೂ ಜೊತೆಯಲ್ಲಿ ಕಾಣಿಸಿಕೊಂಡಿದ್ದೆ ಇದಕ್ಕೆಲ್ಲ ಕಾರಣವಾಗಿತ್ತು. ಇದೀಗ ತೆಲುಗಿನ ಖ್ಯಾತ ನಿರ್ಮಾಪಕನ ಪುತ್ರ ಹಾಗೂ ನಟ ಬೆಲ್ಲಂಕೊಂಡ ಶ್ರೀನಿವಾಸ್ ಈ ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಶ್ಮಿಕಾ ನಾನು ಒಳ್ಳೆಯ ಗೆಳೆಯರಷ್ಟೆ. ನಾವಿಬ್ಬರೂ ಡೇಟಿಂಗ್ ಮಾಡುತ್ತಿಲ್ಲ.  ಏರ್ಪೋರ್ಟ್ ನಲ್ಲಿ ಒಟ್ಟಿಗೆ ಸಿಕ್ಕಿದ್ದೆವು. ಕ್ಯಾಮೆರಾದವರು ಒಟ್ಟಿಗೆ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರಷ್ಟೆ. ಇನ್ನೊಮ್ಮೆ ರೆಡ್ ಕಾರ್ಪೆಟ್ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಷ್ಟೆ. ಇಷ್ಟಕ್ಕೆ ಲವ್ ಡೇಟಿಂಗ್ ಎಲ್ಲಾ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ವೀಕ್ಷಿಸಿ: 'ಕರಿ ಹೈದ ಕೊರಗಜ್ಜ' ಚಿತ್ರೀಕರಣ ವೇಳೆ ನಡೆಯಿತು ಪವಾಡ: ಚಿತ್ರತಂಡದಿಂದ ಕೊರಗಜ್ಜ ದೇವಾಲಯ ನಿರ್ಮಾಣ !