ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಾಧಿಕ ಕುಮಾರಸ್ವಾಮಿ: ಜೊತೆಯಾದ ಬಾಲಿವುಡ್ ಹೀರೋ !
ರಾಧಿಕಾ ಕುಮಾರಸ್ವಾಮಿಗೆ ಬಾಲಿವುಡ್ ಹೀರೋ ನಾಯಕ
7 ಭಾಷೆಯ ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಾಧಿಕಾ ನಟನೆ
ಈ ಸಿನಿಮಾದಲ್ಲಿದೆ ಮೂರು ಭಾಷೆಯ ದೊಡ್ಡ ತಾರಾಗಣ
ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ "ಅಜಾಗ್ರತ" ಚಿತ್ರದ ಮುಹೂರ್ತ ಸಮಾರಂಭ ಮೇ.13 ರಂದು ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯಲಿದೆ. ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ರವಿರಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುವ ನಿರ್ದೇಶಕ ಎಂ. ಶಶಿಧರ್ ನಿರ್ದೇಶಿಸುತ್ತಿದ್ದಾರೆ. ಎಂ.ಎಸ್.ಸಿ ಇನ್ ಫಿಲಂ ಮೇಕಿಂಗ್ ಕಲಿತಿರುವ ನಿರ್ದೇಶಕ ಶಶಿಧರ್ ವಿ, ಎಫ್ ಎಕ್ಸ್ ನಲ್ಲೂ ಪರಿಣತಿ ಹೊಂದಿದ್ದಾರೆ. ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಅಭಿನಯದ "ಘಾರ್ಗ" ಚಿತ್ರವನ್ನು ನಿರ್ದೇಶಿಸಿರುವ ಶಶಿಧರ್ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. "ಅಜಾಗ್ರತ " ಒಂದು ಸೈಕಾಲಜಿಕಲ್ ಕ್ರೈಂ ಥ್ರಿಲ್ಲೆರ್ ಕಥೆ ಹೊಂದಿರುವ ಚಿತ್ರವಾಗಿದೆ. ಏಳು ಭಾಷೆಗಳಲ್ಲಿಯೂ ನೇರ ಚಿತ್ರೀಕರಣವಾಗುತ್ತಿರುವುದು ಇದರ ವಿಶೇಷವಾಗಿದೆ.
ಇದನ್ನೂ ವೀಕ್ಷಿಸಿ: ರಶ್ಮಿಕಾ, ಬೆಲ್ಲಂಕೊಂಡ ಶ್ರೀನಿವಾಸ್ ನಡುವಿನ ಸಂಬಂಭ ಏನು: ಈ ಬಗ್ಗೆ ನಟ ಹೇಳಿದ್ದೇನು ?