Karnataka election:ಯುವಕರು ಹೆಚ್ಚು ಮತದಾನ ಮಾಡಿ, ನಿಮ್ಮ ಮತ ವ್ಯರ್ಥ ಮಾಡಬೇಡಿ: ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಹಾಗೂ ಮಗಳ ಜೊತೆ ಬಂದು ಮತದಾನ ಮಾಡಿದ್ದಾರೆ. ಅಲ್ಲದೇ ಎಲ್ಲಾರು ವೋಟ್ ಮಾಡಿ ಎಂದು ಹ್ಯಾಟ್ರಿಕ್ ಹೀರೋ ಕರೆ ನೀಡಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಇಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ನಡುವೆ ಹಲವು ಗಣ್ಯಾತೀಗಣ್ಯರು ಮತಗಟ್ಟೆಗೆ ಆಗಮಿಸಿ ತಮ್ಮ ಮತ ಚಲಾಯಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕುಟುಂಬ ಸಮೇತರಾಗಿ ಬಂದು, ರಾಚೇನಹಳ್ಳಿ 348 ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿರುವ ರಾಚೇನಹಳ್ಳಿ ಕನ್ನಡ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಶಿವರಾಜ್ ಕುಮಾರ್, ಪತ್ನಿ ಗೀತಾ ಹಾಗೂ ಮಗಳು ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರು ವೋಟ್ ಮಾಡಿ. ವೋಟಿಂಗ್ ಜಾಸ್ತಿ ಆದಷ್ಟು, ಸ್ಪರ್ಧೆ ಹೆಚ್ಚಾಗುತ್ತದೆ. ಯುವಕರು ಹೆಚ್ಚು ಮತದಾನ ಮಾಡಿ. ಯಾರೂ ನಿಮ್ಮ ಮತವನ್ನು ವೇಸ್ಟ್ ಮಾಡಬೇಡಿ ಎಂದು ಶಿವಣ್ಣ ಹೇಳಿದರು.
ಇದನ್ನೂ ವೀಕ್ಷಿಸಿ: Karnataka Election 2023: ಪತ್ನಿ ಜೊತೆ ಬಂದು ಮತ ಹಾಕಿದ ನವರಸ ನಾಯಕ ಜಗ್ಗೇಶ್