ಮೆಗಾಸ್ಟಾರ್ ಬ್ಲಡ್ ಬ್ಯಾಂಕ್ ವಿರುದ್ಧ ಆರೋಪ: ಜನಪ್ರಿಯ ಸ್ಟಾರ್ ದಂಪತಿಗೆ 1 ವರ್ಷ ಜೈಲು?:
ಜನಪ್ರಿಯ ಸ್ಟಾರ್ ದಂಪತಿಗೆ 1 ವರ್ಷ ಜೈಲು?
ತೆಲುಗು ನಟ ರಾಜಶೇಖರ್ ಮಾಡಿದ ತಪ್ಪೇನು?
ಬಾಯಿಗೆ ಬಂದಂತೆ ಮಾತಾಡಿದ್ದೆ ಸಮಸ್ಯೆ ಆಯ್ತಾ?
ಸುಮ್ಮನೆ ಇರದೆ ಇರುವೆ ಬಿಟ್ಟುಕೊಳ್ಳೋದು ಅಂದ್ರೆ ಇದೇ ಏನೋ. ಸೋಲುಗಳು ಮನುಷ್ಯ ಮನಸ್ಸನ್ನು ಕೂಡ ಹಾಳು ಮಾಡಿಬಿಡುತ್ತೆ ಎನ್ನುವುದಕ್ಕೆ ಇದೆ ಸಾಕ್ಷಿ. ತೆಲುಗಿನ ಹೆಸರಾಂತ ನಟ ರಾಜಶೇಖರ್(Actor Rajasekhar) ಮತ್ತು ಅವರ ಪತ್ನಿ ಜೀವಿತಾಗೆ ನಾಂಪಲ್ಲಿ ಕೋರ್ಟ್ ನ ಮುಖ್ಯ ಮ್ಯಾಜಿಸ್ಟ್ರೇಟ್ ಒಂದು ವರ್ಷ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿ ನೀಡುವಂತೆ ಆದೇಶ ಹೊರಡಿಸಿದ್ದಾರೆ. ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ರಾಜಶೇಖರ್ ಮತ್ತು ಪತ್ನಿ ಜೀವಿತಾ(Jeevitha) ಮಾಡಿರುವ ಆರೋಪ ಸುಳ್ಳು ಎಂದು ಸಾಬೀತಾಗಿದೆ. 2011ರಲ್ಲಿ ನಟ ರಾಜಶೇಖರ್ ಮತ್ತು ಅವರ ಪತ್ನಿ ಒಟ್ಟಾಗಿ ಮೆಗಾಸ್ಟಾರ್ ಚಿರಂಜೀವಿ(Chiranjeevi) ಬ್ಲಡ್ ಬ್ಯಾಂಕ್ ನಲ್ಲಿ(Blood bank) ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಇಲ್ಲಿಗೆ ಬರುವ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಕುರಿತು ಚಿರಂಜೀವಿ ಅವರ ಭಾವ ಅಲ್ಲು ಅರವಿಂದ್ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು ನಟ ಚಿರಂಜೀವಿ ಕಂಡರೆ ನಟ ರಾಜಶೇಖರ್ ಅವರಿಗೆ ಆಗುವುದಿಲ್ಲ. ಕಾರಣ ಸಿಕ್ಕಾಗೆಲ್ಲ ಚಿರಂಜೀವಿಯನ್ನು ಟೀಕಿಸುತ್ತಲೇ ಇರುತ್ತಾರೆ ರಾಜಶೇಖರ್. ಇದಕ್ಕೆ ವೃತ್ತಿ ವೈಷಮ್ಯ ಕೂಡ ಕಾರಣ ಎಂದು ಹೇಳಲಾಗುತ್ತಿದೆ.
ಇದನ್ನೂ ವೀಕ್ಷಿಸಿ: ಹೆಂಗಸರು ಗ್ರೇಟಾ?..ಗಂಡಸರು ಗ್ರೇಟಾ? : ಕೌಸಲ್ಯಾ ಸುಪ್ರಜಾ ರಾಮ ಕತೆಯಾದ್ರೂ ಏನು?