ನಾನ್‌ವೆಜ್ ಪ್ರೀಯರ ಆಡು ಈಗ ಸಿನಿಮಾದಲ್ಲಿ ದೇವ್ರು: 'ಆಡೇ ನಮ್ ಗಾಡ್' ಸಿನಿಮಾ ಟೀಸರ್ ರಿಲೀಸ್..!
ಆಡು ಸ್ವಾಮಿಯ ಮಹಿಮೆ ಸಾರುತ್ತೆ ‘ಆಡೇ ನಮ್ ಗಾಡ್’
ಆಡೇ ನಮ್ ಗಾಡ್ ಹೀರೋಗೆ ಡೈರೆಕ್ಟರ್ ಕಪಾಳ ಮೋಕ್ಷ.!
ಹೊಸ ಪ್ರತಿಭಿಗಳ ವಿಭಿನ್ನ ಪ್ರಯತ್ನ ಆಡೇ ನಮ್ ಗಾಡ್!
ಆಡೇ ನಮ್ ಗಾಡ್.. ಈ ಸಿನಿಮಾದ ಟೈಟಲ್ಲೇ ಇಷ್ಟು ವಿಭಿನ್ನವಾಗಿದೆ. ಏನಿದು 'ಆಡೇ ನಮ್ ಗಾಡ್' ಸಿನಿಮಾದ ಕಥೆ? ಅಂತ ಕುತೂಹಲ ಹೆಚ್ಚಾಗುತ್ತೆ ಅಲ್ವಾ.? ಯೆಸ್, ಆಡು ಸ್ವಾಮಿ(Aadu Swami)ಯ ಮಹಿಮೆ ಸಾರುತ್ತೆ ‘ಆಡೇ ನಮ್ ಗಾಡು’ ಸಿನಿಮಾ (Aade Nam Gadu). ಅಂದ್ರೆ ಆಡನ್ನ ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತೆ. ನಾಲ್ಕು ಜನ ಯುವಕರ ಜೀವನದಲ್ಲಿ ಒಂದು ಆಡು ಬಂದಾಗ ಏನಾಗುತ್ತದೆ ಎನ್ನುವುದು ಅನ್ನೋ ಸ್ಪೆಷಲ್ ಸ್ಟೋರಿ ಈ ಸಿನಿಮಾದಲ್ಲಿದೆ. ಇಂತಹ ವಿಭಿನ್ನ ಕತೆಯ ಚಿತ್ರದಲ್ಲಿ ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್ (Nataraj), ಮಂಜುನಾಥ್ ಜಂಬೆ, ಏಷ್ಯಾನೆಟ್ ಸುವರ್ಣ ನ್ಯೂಸ್ನ ಪ್ರೋಗ್ರಾಂ ಪ್ರೊಡ್ಯೂಸರ್ ಅಜಿತ್ ಬೊಪ್ಪನಹಳ್ಳಿ, ಪಿಂಕಿ ಎಲ್ಲಿ ಚಿತ್ರದ ಅನೂಪ್ ಶೂನ್ಯ, ಸಾರಿಕ ರಾವ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಆಡೇ ನಮ್ ಗಾಡ್ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮ ಸಖತ್ ಇಂಟ್ರೆಸ್ಟಿಂಗ್ ಆಗಿತ್ತು. ಈ ಸಿನಿಮಾದ ನಿರ್ದೇಶಕ ಪಿ.ಎಚ್.ವಿಶ್ವನಾಥ್ ಆಡೇ ನಮ್ಮGod ಹೀರೋ ಅಜಿತ್ ಬೊಪ್ಪನಳ್ಳಿಗೆ ಕಪಾಳ ಮೋಕ್ಷ ಮಾಡಿದ್ದು ಆಯ್ತು. ಈ ಸಿನಿಮಾ ಕಾಮಿಡಿ ಮೂವಿ(Comedy movie) ಆಗಿದ್ರಿಂದ ನಿರ್ದೇಶಕರಿಗೆ ಹಾಸ್ಯ ಮಾಡೋಕೆ ಹೋಗಿ ಸ್ಟೇಜ್ ಮೇಲೆ ಎಲ್ಲರೆದುರು ಹೀರೋ ಅಜೀತ್ ಬೊಪ್ಪನಳ್ಳಿ ಕಪಾಳಕ್ಕೆ ಹೊಡೆತ ತಿಂದಿದ್ರು. ಮತ್ತೊಂದ್ ಕಡೆ ಈ ಸುದ್ದಿಗೋಷ್ಟಿಗೆ ಆಡುಗಳು ಬಂದಿದ್ದು ವಿಶೇಷವಾಗಿತ್ತು. ಪ್ರೊ.ಬಿ.ಬಸವರಾಜ್ ಆಡೇ ನಮ್ ಗಾಡ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು. ಈ ಸಿನಿಮಾ ಕನ್ನಡ ಸಿನಿ ಪ್ರೇಕ್ಷಕರಿಗೆ ವಿಭಿನ್ನ ಬಗೆಯ ಮನೊರಂಜನೆ ಕೊಡೋದ್ರಲ್ಲಿ ನೋ ಡೌಟ್.
ಇದನ್ನೂ ವೀಕ್ಷಿಸಿ: ಸಲಾರ್ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಪತ್ರ ಬರೆದಿದ್ದೇಕೆ..? ಅದರಲ್ಲೇನಿದೆ..?