Asianet Suvarna News Asianet Suvarna News

ಹುಡುಗಿಯರೇ ಎಚ್ಚರ..ಡೇಟಿಂಗ್‌ ಆಪ್‌ನಲ್ಲಿ ಆಕ್ಟಿವ್‌ ಆಗಿದ್ದಾರೆ ಕಾಮುಕರು

ಸಾಮಾಜಿಕ ಜಾಲತಾಣಗಳ ಅಬ್ಬರದ ಈ ದಿನಗಳಲ್ಲಿ ಜನ ಆನ್‌ಲೈನ್‌ ಡೇಟಿಂಗ್‌, ಚಾಟಿಂಗ್‌, ಫ್ಲರ್ಟಿಂಗ್‌ ಅದೂ ಇದು ಅಂತ ಕಾಲ ಕಳೀತಾರೆ. ಬಹುತೇಕರು ಡೇಟಿಂಗ್‌ ಆಪ್‌ನಲ್ಲಿಯೇ ತಮ್ಮ ಬಾಳಸಂಗಾತಿಯನ್ನು ಹುಡುಕಿಕೊಳ್ತಾರೆ. ಆದ್ರೆ ಇಂಥಾ ಆಪ್‌ಗಳಲ್ಲೇ ಹುಡುಗಿಯರನ್ನು ಕಾಡೋ ಕಾಮುಕರ ಹಾವಳಿ ಹೆಚ್ಚಾಗಿದೆ.

ಡೇಟಿಂಗ್ ಅಪ್ಲಿಕೇಷನ್ ಗಳು ಎಷ್ಟು ಸುಲಭವೋ ಅಷ್ಟೇ ಅಪಾಯಕಾರಿ. ಅನೇಕ ಮೋಸದ ಘಟನೆಗಳು ಆಗಾಗ ವರದಿಯಾಗ್ತಿರುತ್ತವೆ. ಬಂಬಲ್ ಆಪ್‌ನಲ್ಲಿ ಸಂಗಾತಿಯನ್ನು ಹುಡುಕುತ್ತಿದ್ದ ಬೆಂಗಳೂರಿನ ಯುವತಿ ಹೀಗೆಯೇ ಮೋಸ ಹೋಗಿದ್ದಾಳೆ. ಬಂಬಲ್ ಆಪ್‌ನಲ್ಲಿ ಸಂಗಾತಿಯನ್ನು ಹುಡುಕುತ್ತಿದ್ದ ಯುವತಿಗೆ ಅನಿರುದ್ಧ ಎಂಬಾತನ ಪರಿಚಯವಾಗಿತ್ತು. ಅನಿರುದ್ಧ್‌, ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಸಹ ಬೆಳೆಸಿದ್ದ. ಆ ನಂತರ ಆತನ ಹೆಸರು ಅನಿರುದ್ಧ ಅಲ್ಲ ಮುದಾಸಿರ್ ಎಂಬುದು ಗೊತ್ತಾಗಿದೆ.

ಮಾತ್ರವಲ್ಲ ತಾಯಿಗೆ ಹುಷಾರಿಲ್ಲ ಎಂದು ಯುವತಿ ಕೈಯಿಂದ ಒಂದು ಲಕ್ಷ ರೂ. ಹಣವನ್ನೂ ಪಡೆದಿದ್ದ. ನಂತರ ತಾಯಿ ತೀರಿ ಹೋಗಿದ್ದಾರೆಂದು ಸಹ ಹೇಳಿದ್ದ. ಸ್ವಲ್ಪ ದಿನಗಳ ಬಳಿಕ ದುಬೈಗೆ ಹೋಗಿದ್ದ. ಆ ನಂತರ ಆತನ ಫೋನ್ ಸ್ವಿಚ್‌ ಆಫ್ ಆಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಮೋಸ ಹೋದ ಯುವತಿ ಮತ್ತೊಂದು ವಿಷಯ ತಿಳಿದುಬಂದಿದೆ. ಮುದಾಫಿರ್ ಗೆ ಈಗಾಗಲೇ ಮದುವೆಯಾಗಿದೆ ಮತ್ತು ಮಕ್ಕಳೂ ಇದ್ದಾರೆ ಎಂಬುದು ತಿಳಿದುಬಂದಿದೆ.

ಅಯ್ಯೋ ಕರ್ಮವೇ! ಹುಡುಗಿ ಚೆನಾಗಿದಾಳೆ ಅಂತ ಲೈವ್‌ ಚಾಟ್‌ಲಿ ಬೆತ್ತಲಾದ, ಪಾಪ ಆಮೇಲಾಗಿದ್ದೇ ಬೇರೆ

Video Top Stories