ಕೈ ಕತ್ತರಿಸುತ್ತೇನೆ! ಕಾಂಗ್ರೆಸ್ ಶಾಸಕನಿಗೆ ಬಿಜೆಪಿ ನಾಯಕನ ವಾರ್ನಿಂಗ್

ಮತದಾನದ ದಿನ ಹತ್ತಿರವಾಗುತ್ತಿದ್ದಂತೆ, ಉಪಚುನಾವಣಾ ಅಖಾಡ ರಂಗೇರುತ್ತಿದೆ. ವಾಕ್ಸಮರ ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಕೈ ಕಡಿಯುವ ಮಾತುಗಳು ಕೇಳಿ ಬರುತ್ತಿವೆ! ಬಿಜೆಪಿ ನಾಯಕರೊಬ್ಬರು  ಕಾಂಗ್ರೆಸ್ ಶಾಸಕ, ಮಾಜಿ ಸಚಿವರೊಬ್ಬರ ಕೈ ಕತ್ತರಿಸುವ ಬೆದರಿಕೆ ಹಾಕಿದ್ದಾರೆ. 

First Published Nov 7, 2019, 4:44 PM IST | Last Updated Nov 7, 2019, 4:44 PM IST

ಬೆಂಗಳೂರು (ನ.07): ಮತದಾನದ ದಿನ ಹತ್ತಿರವಾಗುತ್ತಿದ್ದಂತೆ, ಉಪಚುನಾವಣಾ ಅಖಾಡ ರಂಗೇರುತ್ತಿದೆ. ವಾಕ್ಸಮರ ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಕೈ ಕಡಿಯುವ ಮಾತುಗಳು ಕೇಳಿ ಬರುತ್ತಿವೆ! 

ಚಿಕ್ಕಬಳ್ಳಾಪುರದ ಬಿಜೆಪಿ ನಾಯಕರೊಬ್ಬರು ಗೌರಿಬಿದನೂರು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಶಿವಶಂಕರ್ ರೆಡ್ಡಿಯ ಕೈ ಕತ್ತರಿಸುವ ಬೆದರಿಕೆ ಹಾಕಿದ್ದಾರೆ. ಮಂಚೇನಹಳ್ಳಿ ತಾಲೂಕು ರಚನೆ  ವಿಚಾರದಲ್ಲಿ ಅನರ್ಹ ಶಾಸಕ ಡಾ. ಸುಧಾಕರ್ ಹಾಗೂ ಶಿವಶಂಕರ್ ರೆಡ್ಡಿ ನಡುವೆ ಮಾತಿನ ಸಮರ ನಡೆಯುತ್ತಿದೆ.

ಶಾಸಕರ ರಾಜೀನಾಮೆಯಿಂದ ತೆರವಾಗಿರುವ 15 ಕ್ಷೇತ್ರಗಳಿಗೆ ಡಿಸೆಂಬರ್ 5ನೇ ತಾರೀಕು ಉಪಚುನಾವಣೆ ನಡೆಯಲಿದ್ದು, 9ಕ್ಕೆ ಫಲಿತಾಂಶ ಪ್ರಕಟವಾಗಲಿದೆ.