ರಾಜ್ಯ ರಾಜಕೀಯದಲ್ಲಿ ಹೇಗಿದೆ ಗೊತ್ತಾ ಸನ್ಯಾಸಿ ರಾಜ'ಕಾರಣ'..? ಖಾಲಿಯಿಲ್ಲದ ಸಿಎಂ ಕುರ್ಚಿಗಾಗಿ ಭುಗಿಲೆದ್ದ ಸಂಘರ್ಷ..!

ಕೈ ನಾಯಕರ ಅಂತರ್ಯುದ್ಧದ ಅಖಾಡಕ್ಕೆ ಸ್ವಾಮೀಜಿಗಳ ರಂಗಪ್ರವೇಶ..!
ಪ್ರಹ್ಲಾದ್ ಜೋಶಿ ವಿರುದ್ಧ ದಂಗಲ್‌ಗಿಳಿದಿದ್ದರು ದಿಂಗಾಲೇಶ್ವರ ಸ್ವಾಮೀಜಿ..!
ಯಡಿಯೂರಪ್ಪನವರ ಮುಂದೆಯೇ ಪಟ್ಟು ಹಾಕಿದ್ದರು ವಚನಾನಂದ ಶ್ರೀ..!

First Published Jun 29, 2024, 5:33 PM IST | Last Updated Jun 29, 2024, 5:33 PM IST

ಒಕ್ಕಲಿಗ ಸ್ವಾಮೀಜಿ ಆಯ್ತು..ಈಗ ವೀರಶೈವ-ಲಿಂಗಾಯತ ಸಮುದಾಯದ ಸ್ವಾಮೀಜಿ ಸರದಿ. ಕಾಂಗ್ರೆಸ್‌ನಲ್ಲಿ ಹೊತ್ತಿಕೊಂಡಿರೋ ಸಿಎಂ ಸಂಘರ್ಷದ ಕಿಚ್ಚಿಗೆ ರಾಜ್ಯದ ಎರಡು ದೊಡ್ಡ ಸಮುದಾಯಗಳ ಇಬ್ಬರು ಸ್ವಾಮೀಜಿಗಳು ತುಪ್ಪ ಸುರಿದಿದ್ದಾರೆ. ನಮ್ಮ ಸಮುದಾಯದವರನ್ನು ಮುಖ್ಯಮಂತ್ರಿ( Chief Minister post) ಮಾಡಿ ಅನ್ನೋ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಚುನಾವಣೆಯಲ್ಲಿ ಒಬ್ಬ ವ್ಯಕ್ತಿಯ ಸೋಲು ಗೆಲುವನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರೋ ಮಠಗಳು, ಸ್ವಾಮೀಜಿಗಳೂ ಇದ್ದಾರೆ. ಹೀಗಾಗಿ ನಮ್ಮ ರಾಜಕಾರಣಿಗಳಿಗೆ ಮಠಗಳಂದ್ರೆ, ಸ್ವಾಮೀಜಿಗಳಂದ್ರೆ ಇನ್ನಿಲ್ಲದ ಗೌರವ. ರಾಜ್ಯ ರಾಜಕೀಯದಲ್ಲಿ ಕಾಲ ಕಾಲಕ್ಕೆ ಪ್ರಭಾವ ಬೀರುತ್ತಾ ಬಂದಿರೋ ಸ್ವಾಮೀಜಿಗಳು ಈಗ ಕಾಂಗ್ರೆಸ್ ಸರ್ಕಾರದೊಳಗೆ ನಡೀತಾ ಇರೋ ಸಿಎಂ ಸಂಘರ್ಷಕ್ಕೆ ತುಪ್ಪ ಸುರಿದಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ-ಡಿಸಿಎಂ ಸಂಘರ್ಷ ಶುರುವಾಗಿದೆ. ಖಾಲಿಯಿಲ್ಲದ ಕುರ್ಚಿಗಳಿಗೆ ಕಿತ್ತಾಟ ನಡೀತಾ ಇದೆ. ಹೆಚ್ಚುವರಿ ಡಿಸಿಎಂ ನೇಮಕ ಮಾಡ್ಬೇಕು ಅಂತ ಸಿದ್ದರಾಮಯ್ಯನವರ (Siddaramaiah) ಆಪ್ತ ಸಚಿವರು ಶುರು ಮಾಡಿದ್ದ ಆಟವೀಗ ರೋಚಕ ತಿರುವು ಪಡೆದುಕೊಂಡಿದೆ. ಡಿಸಿಎಂ ಪಟ್ಟದ ಸುತ್ತ ನಡೀತಾ ಇದ್ದ ಅಂತರ್ಯುದ್ಧವೀಗ ಸಿಎಂ ಕುರ್ಚಿಯವರೆಗೆ ಬಂದು ನಿಂತಿದೆ. ಹೆಚ್ಚುವರಿ ಡಿಸಿಎಂ ನೇಮಕ ಮಾಡೋದಾದ್ರೆ, ಡಿಕೆ ಶಿವಕುಮಾರ್ (DK Shivakumar) ಅವ್ರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿ ಅಂತ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದೇ ತಡ. ಚದುರಂಗದಾಟಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿ ಬಿಟ್ಟಿದೆ. ಕಾಂಗ್ರೆಸ್ (Congress)ಶಾಸಕರು ಮತ್ತು ಮಂತ್ರಿಗಳ ಮಧ್ಯೆ ನಡೀತಾ ಇದ್ದ ಅಂತರ್ಯುದ್ಧದ ರಂಗಸ್ಥಳಕ್ಕೆ ಈಗ ಸ್ವಾಮೀಜಿಗಳ ರಂಗಪ್ರವೇಶವಾಗಿದೆ. ಸಿಎಂ ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರಲ್ಲಿ ಮೊದಲಿಗರು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ. 

ಇದನ್ನೂ ವೀಕ್ಷಿಸಿ:  88 ವರ್ಷಗಳ ಹಿಸ್ಟರಿ ಬ್ರೇಕ್.. 2 ದಿನ ಭಾರೀ ಮಳೆ ಅಲರ್ಟ್..! ವಾಹನ ಸವಾರರ ಪರದಾಟ..!

Video Top Stories