Asianet Suvarna News Asianet Suvarna News

88 ವರ್ಷಗಳ ಹಿಸ್ಟರಿ ಬ್ರೇಕ್.. 2 ದಿನ ಭಾರೀ ಮಳೆ ಅಲರ್ಟ್..! ವಾಹನ ಸವಾರರ ಪರದಾಟ..!


ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್..ಪ್ರಯಾಣಿಕರ ರಕ್ಷಣೆ ಹೇಗಾಯ್ತು? 
ಅಂಡರ್ ಪಾಸ್ ನೀರಿನಲ್ಲಿ ಮುಳುಗಿತು ಕಾರ್.. ವ್ಯಾನ್.. ಬೈಕ್..!
ನದಿಯಂತಾದ ರಸ್ತೆಗಳು.. ಗಲ್ಲಿ ಗಲ್ಲಿಗಳಿಗೂ ನುಗ್ಗಿದ ಮಳೆ ನೀರು..!

ರಾಷ್ಟ್ರರಾಜಧಾನಿ ದೆಹಲಿ (Delhi) ಅಕ್ಷರಶಃ ತತ್ತರಿಸಿ ಹೋಗಿದೆ. 50ಡಿಗ್ರಿ ಬಿಸಿಲಿನಿಂದ ಬೇಸತ್ತಿದ್ದ ಜನರಿಗೀಗ ಡೆಡ್ಲಿ ಮಳೆ (Heavy Rain) ಶಾಕ್ ಕೊಟ್ಟಿದೆ. ರಾತ್ರೋರಾತ್ರಿ ಸುರಿದ ಮಳೆ ಇಡೀ ದೆಹಲಿಯನ್ನ ಆವರಿಸಿದ್ದು. ರಸ್ತೆ, ಗಲ್ಲಿಗಳು ನದಿಯಂತಾಗಿವೆ. ಕಣ್ಣೆದುರೇ ವಾಹನಗಳು ಕೊಚ್ಚಿ ಹೋದ್ರೆ, ನೀರಿನ ಮಧ್ಯೆ ಸಿಲುಕಿದ ಬಸ್‌ನಲ್ಲಿದ್ದ ಪ್ರಯಾಣಿಕ ರಕ್ಷಣೆ ಮಾಡಲಾಗಿದೆ. ಅಷ್ಟೆ ಅಲ್ದೆ ದೆಹಲಿ ಏರ್ಪೋರ್ಟ್ (Delhi Airport) ಮಳೆಯಾರ್ಭಟಕ್ಕೆ ಸಿಲುಗಿ ಛಿದ್ರಛಿದ್ರವಾಗಿದೆ.  ದೆಹಲಿಯ ರಸ್ತೆಗಳೆಲ್ಲಾ ನದಿಗಳಂತಾಗಿದೆ. ಜನ ದಿಕ್ಕುತಪ್ಪಿದ ಪಕ್ಷಿಗಳ ಹಾಗೆ ಪರಿತಪಿಸ್ತಾ ಇದಾರೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗೋದು ಅಂದ್ರೆ. ಅದು ಸಾಹಸಯಾತ್ರೆಯೇ ಆಗಿಬಿಟ್ಟಿದೆ.  ಅಚ್ಚರಿಯ ವಿಷ್ಯ ಏನಂದ್ರೆ ನಿನ್ನೆ ಮೊನ್ನೆವರೆಗೂ ಸೂರ್ಯನ ಶಾಖಕ್ಕೆ ಕಾದು ಕೆಂಡದಂತಾಗಿದ್ದ ದೆಹಲಿ, ಇಂದು ರಕ್ಕಸ ಮಳೆಗೆ ತತ್ತರಿಸಿ ಹೋಗಿದೆ. ಬರೊಬ್ಬರಿ 50 ಡಿಗ್ರಿ ತಾಪಮಾನಕ್ಕೆ ಬೆಂದು ಹೋಗಿದ್ದ ಜನ ಮಳೆಯಾಯ ಬಾರಯ್ಯ ಅಂತಿದ್ರು. ದೆಹಲಿ ಮಂದಿಯ ಕರೆಗೆ ಓಗೊಟ್ಟು ಬಂದ ಮಳೆರಾಯ ಇಂದು ರಾಧಾಂತವನ್ನೇ ಸೃಕ್ಷ್ಟಿ ಮಾಡ್ಬಿಟ್ಟಿದ್ದಾನೆ. ರಣರಣ ಮಳೆಗೆ ಇದೀಗ ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ವೀಕ್ಷಿಸಿ:  Murder in Ramanagar: ದುಡ್ಡು ಕೊಡ್ತೀನಿ ಅಂತ ಕರೆಸಿಕೊಂಡು ಕೊಲೆ..! ಮಗಳು ಉಸಿರುಗಟ್ಟಿಸಿದ್ರೆ..ಅಳಿಯ ಗುಂಡಿ ತೋಡಿದ..!

Video Top Stories