ಪಬ್ಲಿಕ್‌ನಲ್ಲಿ ಬಾಯಿಗೆ ಬಂದಂತೆ ಬೈದಾಡಿಕೊಂಡ MP-MLA

ತುಮಕೂರು ಜಿಲ್ಲೆಯ ಬೆಸ್ಕಾಂ ವಿದ್ಯುತ್ ಎಂಎಸ್‌ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಗುಬ್ಬಿ ಜೆಡಿಎಸ್​ ಶಾಸಕ ಶ್ರೀನಿವಾಸ್​ ಹಾಗೂ ತುಮಕೂರು ಬಿಜೆಪಿ ಸಂಸದ ಜಿ.ಎಸ್​​.ಬಸವರಾಜು ಪರಸ್ಪರ ಏಕವಚನದಲ್ಲೇ ಬೈದಾಡಿಕೊಂಡಿರುವ ಘಟನೆ ನಡೆದಿದೆ.

First Published Aug 14, 2021, 3:57 PM IST | Last Updated Aug 14, 2021, 3:57 PM IST

ತುಮಕೂರು, ಆ.14): ಜಿಲ್ಲೆಯ ಬೆಸ್ಕಾಂ ವಿದ್ಯುತ್ ಎಂಎಸ್‌ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಗುಬ್ಬಿ ಜೆಡಿಎಸ್​ ಶಾಸಕ ಶ್ರೀನಿವಾಸ್​ ಹಾಗೂ ತುಮಕೂರು ಬಿಜೆಪಿ ಸಂಸದ ಜಿ.ಎಸ್​​.ಬಸವರಾಜು ಪರಸ್ಪರ ಏಕವಚನದಲ್ಲೇ ಬೈದಾಡಿಕೊಂಡಿರುವ ಘಟನೆ ನಡೆದಿದೆ.

ಪ್ರೀತಂ ಗೌಡ VS ಸೋಮಣ್ಣ: ಏಟು- ತಿರುಗೇಟಿನ ಹಿಂದಿನ ಲೆಕ್ಕಾಚಾರವೇನು.?

ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರದಿಂದ 550 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎಂದು ಸಂಸದ ಬಸವರಾಜು ಹೇಳುತ್ತಿದ್ದಂತೆ ಸಿಡಿದೆದ್ದ ಶಾಸಕ ಶ್ರೀನಿವಾಸ್, ರೈತರಿಗೆ ಸುಳ್ಳು ಯಾಕೆ ಹೇಳ್ತೀರಾ? ವಯಸ್ಸಾಗಿದೆ ಈಗಲಾದರೂ ಸುಳ್ಳು ಹೇಳೋದನ್ನು ನಿಲ್ಲಿಸಿ ಎಂದು ಗುಡುಗಿದ್ದಾರೆ. 

ಅಷ್ಟಕ್ಕೇ ಸುಮ್ಮನಾಗದೇ ನಿನ್ನ ಯೋಗ್ಯತೆಗೆ ಇಷ್ಟು ಬೆಂಕಿ ಹಾಕಾ. ಬರಿ ಸುಳ್ಳು ಹೇಳಿಕೊಂಡೇ ಕಾಲ ಕಳೆಯುತ್ತಿದ್ದೀರಾ. ವಯಸ್ಸಾಗಿದೆ ಈಗಲಾದರೂ ಮಾನ ಮರ್ಯಾದೆಯಿಂದ ಇರಬಾರದೇ ? 550 ಕೋಟಿ ಯಾರು ನಿಮ್ಮ ತಾತ ತಂದಿದ್ನಾ ? 550 ಕೋಟಿ ಎಲ್ಲಿ ತಂದಿದ್ದೀರಿ ತೋರಿಸಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.