ಪ್ರೀತಂ ಗೌಡ VS ಸೋಮಣ್ಣ: ಏಟು- ತಿರುಗೇಟಿನ ಹಿಂದಿನ ಲೆಕ್ಕಾಚಾರವೇನು.?
ಸಂಪುಟ ವಿಸ್ತರಣೆಯಾದ ಬಳಿಕ ಕೆಲವರಿಗೆ ಖಾತೆ ಹಂಚಿಕೆ ಅಸಮಾಧಾನ ತಂದರೆ, ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸಿಎಂ ಬೊಮ್ಮಾಯಿ- ದೇವೇಗೌಡ್ರ ಭೇಟಿ ಅಸಮಾಧಾನ ತಂದಿದೆ.
ಬೆಂಗಳೂರು (ಆ. 13): ಸಂಪುಟ ವಿಸ್ತರಣೆಯಾದ ಬಳಿಕ ಕೆಲವರಿಗೆ ಖಾತೆ ಹಂಚಿಕೆ ಅಸಮಾಧಾನ ತಂದರೆ, ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸಿಎಂ ಬೊಮ್ಮಾಯಿ- ದೇವೇಗೌಡ್ರ ಭೇಟಿ ಅಸಮಾಧಾನ ತಂದಿದೆ. ಈ ಬಗ್ಗೆ ಪ್ರೀತಂ ಗೌಡ ಹೇಳಿಕೆ ಸೋಮಣ್ಣ ಕೊಟ್ಟ ಪ್ರತಿಕ್ರಿಯೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಬಿಎಸ್‌ವೈ ರಾಜೀನಾಮೆ ಬಳಿಕ ಛಿದ್ರವಾಯ್ತಾ ಮಿತ್ರಮಂಡಳಿ.?
'ನಾನು ರಾಜಕಾರಣ ಮಾಡಲು ಬೆಂಗಳೂರಿಗೆ ಬಂದಿದ್ದೇನೆ. ಕಬ್ಬನ್ ಪಾರ್ಕ್, ಲಾಲ್‌ಭಾಗ್ ನೋಡಲು ಬಂದಿಲ್ಲ. ಹಿರಿಯರಾದವರು ಮಾರ್ಗದರ್ಶನ ಕೊಡಲಿ. ನನ್ನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಹಿಟ್ಲರ್ ಪಕ್ಷವಲ್ಲ' ಎಂದು ವಿ ಸೋಮಣ್ಣಗೆ ಪ್ರೀತಂ ಗೌಡ ಟಾಂಗ್ ನೀಡಿದ್ದಾರೆ. ಇದು ಬರೀ ವಾಕ್ಸಮರನಾ.? ಹಿಂದಿರುವ ಲೆಕ್ಕಾಚಾರವೇನು..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್.