Asianet Suvarna News Asianet Suvarna News

ಕಾಂಗ್ರೆಸ್‌ಗೆ ಠಕ್ಕರ್‌, ಮೈಸೂರಿನಲ್ಲಿ ಬಿಜೆಪಿಯಿಂದ ಸಾವರ್ಕರ್‌ ರಥಯಾತ್ರೆಗೆ ಚಾಲನೆ

ಕಾಂಗ್ರೆಸ್‌ಗೆ ಠಕ್ಕರ್‌ ಕೊಡಲು ಬಿಜೆಪಿಯು  ಮೈಸೂರಿನಲ್ಲೇ ಸಾವರ್ಕರ್‌ ರಥಯಾತ್ರೆ ಆರಂಭಿಸಿದೆ. ರಥಯಾತ್ರೆಗೆ ಬಿಎಸ್‌ ಯಡಿಯೂರಪ್ಪ ಚಾಲನೆ ಕೊಟ್ಟಿದ್ದಾರೆ.
 

First Published Aug 23, 2022, 2:08 PM IST | Last Updated Aug 23, 2022, 2:08 PM IST

ಮೈಸೂರು (ಆ. 23): ಕಾಂಗ್ರೆಸ್‌ ಪಕ್ಷಕ್ಕೆ ಕೌಂಟರ್‌ ಕೊಡುವ ನಿಟ್ಟಿನಲ್ಲಿ ಮೈಸೂರಿನಲ್ಲೇ ಸಾವರ್ಕರ್‌ ರಥಯಾತ್ರೆಯನ್ನು ಬಿಜೆಪಿ ಆರಂಭಿಸಿದೆ. ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. 

ಸಾವರ್ಕರ್‌ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಬಿಎಸ್‌ವೈ ಚಾಲನೆ ನೀಡಿದರು. ಇಡೀ ವಾಹನಕ್ಕೆ ಕೇಸರಿ ಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ವಾಹನದ ಎಲ್‌ಇಡಿಯಲ್ಲಿ ವೀರ್‌ ಸಾವರ್ಕರ್‌ ಬಗ್ಗೆ ಮಾಹಿತಿ. ಸಾವರ್ಕರ್‌ ಜೀವನ ಯಾನದ ಬಗ್ಗೆ ರಥಯಾತ್ರೆ ಮಾಹಿತಿ ನೀಡಲಿದೆ.

ವಿಜಯಪುರ ಕಾಂಗ್ರೆಸ್‌ ಕಚೇರಿಗೆ ಸಾವರ್ಕರ್‌ ಫೋಟೋ ಅಂಟಿಸಿದ ಬಿಜೆಪಿಗ!

ರಥಯಾತ್ರೆ ಉದ್ಘಾಟಿಸಿ ಮಾತನಾಡಿದ ಬಿಎಸ್‌ವೈ, ಎಂಟು ದಿನಗಳ ಈ ಯಾತ್ರೆ ರಾಜ್ಯದ ಅಷ್ಟದಿಕ್ಕುಗಳಲ್ಲೂ, ವೀರ್‌ ಸಾವರ್ಕರ್‌ ಅವರ ಜೀವನ ಮೌಲ್ಯ, ದೇಶ ಪ್ರೇಮದ ಸಂದೇಶವನ್ನು ಸಾರಲಿದೆ. ದೇಶ ಇಂದು ಮಹತ್ವದ ಕಾಲಘಟ್ಟದಲ್ಲಿದೆ. ಒಂದೆಡೆ, ದೇಶ ವಿಶ್ವಗುರು ಅಗುವತ್ತ ದಾಪುಗಾಲು ಇಡುತ್ತಿದೆ. ಇನ್ನೊಂದೆಡೆ ಅನೇಕ ಸವಾಲುಗಳು ನಮ್ಮ ಮುಂದಿದೆ. ದೇಶದ ಮೌಲ್ಯಗಳಿಗೆ ಮಸಿ ಬಳಿಯುವ ಕೆಲಸ ಕೆಲವರಿಂದ ನಡೆಯುತ್ತಿದೆ. ಈ ಪೈಕಿ, ಮುಖ್ಯವಾದದ್ದು ಸಾವರ್ಕರ್‌ ವಿರುದ್ಧ ಅಪಪ್ರಚಾರ' ಎಂದು ಹೇಳಿದರು.

Video Top Stories