ಎಂ.ಬಿ.ಪಾಟೀಲ್ Vs ಪ್ರತಾಪ್ ಸಿಂಹ: ಕಟ್ಟಾ ಕಾಂಗ್ರೆಸಿಗನಿಗೂ ಕಟ್ಟರ್ ಕೇಸರಿ ಕಲಿಗೂ ಏನಿದು ದುಷ್ಮನಿ..?

ಕೈ ಮಿನಿಸ್ಟರ್ Vs ಬಿಜೆಪಿ ಸಂಸದ.. ರಣರಂಗದಲ್ಲಿ ಹೊಸಯುದ್ಧ..!
ಬಂದೂಕು.. ಬುಲೆಟ್.. ಚೇಲಾ.. ಹಿಂಬಾಲಕ.. ಏನಿದು ಗಲಾಟೆ..?
ಉತ್ತರ ಧ್ರುವ.. ದಕ್ಷಿಣ ಧ್ರುವಗಳ ಮಧ್ಯೆ ಘರ್ಷಣೆ ಶುರುವಾಗಿದ್ದೇಕೆ..?

First Published Jun 21, 2023, 12:25 PM IST | Last Updated Jun 21, 2023, 12:25 PM IST

ರಾಜ್ಯ ರಾಜಕಾರಣ ಏನೇನೋ ಗಲಾಟೆಗಳನ್ನು ನೋಡಿದೆ. ದಿಗ್ಗಜರ ದಂಗಲ್‌ಗಳಿಗೆ ಸಾಕ್ಷಿಯಾಗುತ್ತಾ ಬಂದಿದೆ. ಅತಿರಥ-ಮಹಾರಥಿಗಳು ತೊಡೆ ತಟ್ಟಿ ನಿಂತದ್ದನ್ನು ನೀವು ನೋಡಿದ್ದೀರಿ. ಈಗ್ಲೂ ನೋಡ್ತಾನೇ ಇದ್ದೀರಿ. ಎಚ್.ಡಿ ದೇವೇಗೌಡ್ರು Vs ಡಿಕೆ ಶಿವಕುಮಾರ್ ರಣರಂಗ, ಡಿಕೆಶಿ Vs ಎಚ್ಡಿಕೆ ಮಲ್ಲಯುದ್ಧ, ಸಿದ್ದರಾಮಯ್ಯ ಮತ್ತು ದೇವೇಗೌಡ್ರ ನಡುವಿನ ರಾಜಕೀಯ ವೈಷಮ್ಯ. ತೀರಾ ಇತ್ತೀಚೆಗೆ ಕನಕಪುರ ಬಂಡೆ ಮತ್ತು ಗೋಕಾಕ್ ಸಾಹುಕಾರನ ಮಧ್ಯೆ ನಡೆದ ರಣರಣ ಯುದ್ಧ. ಹೀಗೆ ಕರ್ನಾಟಕದ ರಾಜಕೀಯ ಅಖಾಡದಲ್ಲಿ ನಡೆದಿರೋ ಜಿದ್ದಿನ ಕಾಳಗಗಳು ಒಂದೆರಡಲ್ಲ. ಆ ಸಾಲಿಗೆ ಈಗ ಮತ್ತೊಂದು ಸೇರ್ಪಡೆ. ಅದೇ ಎಂ.ಬಿ ಪಾಟೀಲ್ vs ಪ್ರತಾಪ್ ಸಿಂಹ ಪ್ರತಾಪ. ಸ್ಟೇಟ್ ಮಿನಿಸ್ಟರ್ Vs ಮೆಂಬರ್ ಆಫ್ ಪಾರ್ಲಿಮೆಂಟ್ ಮಧ್ಯೆ ಶುರುವಾಗಿದೆ ರಣ ರಣ ರಣರಂಗ. ಒಬ್ರು ರಾಜ್ಯದ ಪ್ರಭಾವಿ ಮಂತ್ರಿ, ಇನ್ನೊಬ್ಬರು ಕೇಂದ್ರದ ಪ್ರಭಾವಿ ಸಂಸದ. ಇಬ್ಬರ ಮಾತಿನ ಮಲ್ಲಯುದ್ಧದಲ್ಲಿ ನುಗ್ಗಿ ಬಂದ ಬುಲೆಟ್‌ಗಳು ಒಂದಕ್ಕಿಂತ ಒಂದು ಪವರ್‌ ಫುಲ್ ಆಗಿವೆ. 

ಇದನ್ನೂ ವೀಕ್ಷಿಸಿ: ಪ್ರಧಾನಿ ನರೇಂದ್ರ ಮೋದಿ ಬದಲಾವಣೆಯ ಹರಿಕಾರ: ವಿಶ್ಲೇಷಕ ರೇ ಡಾಲಿಯೋ

Video Top Stories