Sumalatha: ನಾನು ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ, ಸೇರ್ಪಡೆ ಬಳಿಕ ಮೈತ್ರಿ ಅಭ್ಯರ್ಥಿಗೆ ಬೆಂಬಲ: ಸುಮಲತಾ

ಬಿಜೆಪಿ ಸೇರ್ಪಡೆ ಬಳಿಕ ಮೈತ್ರಿ ಅಭ್ಯರ್ಥಿಗೆ ಬೆಂಬಲ 
ಪ್ರಚಾರದ ಬಗ್ಗೆ ಈಗಲೇ ಏನು ಹೇಳಲ್ಲವೆಂದ ಸಂಸದೆ
ಮಂಡ್ಯದಲ್ಲಿ ಸಂಸದೆ ಸುಮಲತಾ  ಅಧಿಕೃತ ಘೋಷಣೆ

First Published Apr 3, 2024, 2:10 PM IST | Last Updated Apr 3, 2024, 4:13 PM IST

ಮಂಡ್ಯ: 5 ವರ್ಷದ ಹಿಂದೆ ಸ್ವಾಭಿಮಾನದ ಸಮರ ಶುರುವಾಗಿತ್ತು. ಅಂಬರೀಶ್ ಅಂದ್ರೆ ಮಂಡ್ಯ, ಮಂಡ್ಯ(Mandya) ಅಂದ್ರೆ ಅಂಬರೀಶ್. ನಾವು ಎಂದಿಗೂ ಮಂಡ್ಯ ಬಿಟ್ಟು ಹೋಗಲ್ಲ. ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ ಎಂದು ಸಂಸದೆ ಸುಮಲತಾ(Sumalatha ambareesh) ಹೇಳಿದ್ದಾರೆ. ಮಂಡ್ಯ ಜನಕ್ಕೆ ಅಭಿನಂದನೆಯನ್ನು ಸಲ್ಲಿಸಿದರು. ಇದೆ ವೇಳೆ ನಾನು ಬಿಜೆಪಿಗೆ(BJP) ಬೆಂಬಲ ನೀಡುತ್ತಿದ್ದೇನೆ. ಇನ್ನು ಕೆಲವೇ ದಿನದಲ್ಲಿ ಬಿಜೆಪಿ ಸೇರುತ್ತೇನೆ. ಬಿಜೆಪಿ ಸೇರ್ಪಡೆ ಬಳಿಕ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುತ್ತೇನೆ ಎಂದು ಸುಮಲತಾ ಹೇಳಿದ್ದಾರೆ. ನಾನಿನ್ನೂ ಪಕ್ಷೇತರ ಸಂಸದೆ. ಪ್ರಚಾರದ ಬಗ್ಗೆ ಈಗಲೇ ಏನು ಹೇಳಲ್ಲ. ಪಕ್ಷದ ನಿಲುವೇ ನನ್ನ ನಿಲುವು ಎಂದಿದ್ದಾರೆ. ಆದ್ರೆ ಬಿಜೆಪಿ ಸೇರ್ಪಡೆ ಯಾವಾಗ ಎಂದು ಇನ್ನೂ ತಿಳಿಸಿಲ್ಲ. ಕುಮಾರಸ್ವಾಮಿ(HD Kumaraswamy) ಹೆಸರನ್ನೂ ಸುಮಲತಾ ಪ್ರಸ್ತಾಪಿಸಿಲ್ಲ. ಬಿಜೆಪಿ ಸೇರೋವರೆಗೂ ಬೆಂಬಲದ ಬಗ್ಗೆ ತೀರ್ಮಾನವಿಲ್ಲ. ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗುವ ಬಗ್ಗೆ ಏನನ್ನು ಸುಮಲತಾ ಹೇಳಿಲ್ಲ.

ಇದನ್ನೂ ವೀಕ್ಷಿಸಿ:  CM Siddaramaiah: ಶಾಸಕನಾಗಿ ಜಿಟಿಡಿ ಏನು ಕಡಿದು ಕಟ್ಟೆ ಹಾಕಿದ್ದಾನೆ? ಎಲ್ಲರೂ ಸೇರಿ ನಮ್ಮ ಅಭ್ಯರ್ಥಿ ಗೆಲ್ಲಿಸಿ: ಸಿಎಂ