CM Siddaramaiah: ಶಾಸಕನಾಗಿ ಜಿಟಿಡಿ ಏನು ಕಡಿದು ಕಟ್ಟೆ ಹಾಕಿದ್ದಾನೆ? ಎಲ್ಲರೂ ಸೇರಿ ನಮ್ಮ ಅಭ್ಯರ್ಥಿ ಗೆಲ್ಲಿಸಿ: ಸಿಎಂ

ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣ ಇದೆ. ಚಾಮುಂಡೇಶ್ವರಿಯಿಂದ ಜಿಟಿಡಿ 2 ಬಾರಿ ಶಾಸಕನಾಗಿದ್ದಾನೆ. ಶಾಸಕನಾಗಿ ಜಿಟಿಡಿ ಏನು ಕಡಿದು ಕಟ್ಟೆ ಹಾಕಿದ್ದಾನೆ? ಎಂದು ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರ ಸಭೆಯಲ್ಲಿ ಸಿಎಂ ಹೇಳಿದ್ದಾರೆ.
 

First Published Apr 3, 2024, 11:52 AM IST | Last Updated Apr 3, 2024, 4:14 PM IST

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ(CM Siddaramaiah) ಮತ್ತು ಜಿ.ಟಿ.ದೇವೇಗೌಡ(GT Devegowda)ನಡುವೆ ಯುದ್ಧ ನಡೆಯುತ್ತಿದ್ದು, 3 ಬಾರಿ ಶಾಸಕನಾಗಿ ಜಿಟಿಡಿ ಏನು ಮಾಡಿದ್ದಾನೆ ಎಂದು ಸಿಎಂ ಪ್ರಶ್ನಿಸಿದ್ದಾರೆ. ಲೋಕಸಭಾ ಚುನಾವಣೆ ನಮಗೆ ಸವಾಲಾಗಿದೆ. ಚಾಮುಂಡೇಶ್ವರಿಯಲ್ಲಿ(Chamundeshwari) ಕಾಂಗ್ರೆಸ್ ಬಲಿಷ್ಠವಾಗಿದೆ. ಈ ಹಿಂದೆ ನಮ್ಮ ತಪ್ಪಿಂದ ಸೋಲಾಗಿತ್ತು. ಜನರ ತಿರಸ್ಕಾರದಿಂದ ನಮಗೆ ಸೋಲಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್(Congress) ಪರ ವಾತಾವರಣ ಇದೆ. ಚಾಮುಂಡೇಶ್ವರಿಯಿಂದ ಜಿಟಿಡಿ 2 ಬಾರಿ ಶಾಸಕನಾಗಿದ್ದಾನೆ. ಶಾಸಕನಾಗಿ ಜಿಟಿಡಿ ಏನು ಕಡಿದು ಕಟ್ಟೆ ಹಾಕಿದ್ದಾನೆ? 2018ರಲ್ಲಿ ನಮ್ಮವರೇ ನಮ್ಮನ್ನು ಸೋಲಿಸಿದ್ರು. ಇಷ್ಟೆಲ್ಲಾ ಮಾಡಿ ಸೋತೆನಲ್ಲ ಎಂಬ ನೋವಿದೆ. ಎಲ್ಲರೂ ಸೇರಿ ನಮ್ಮ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರ ಸಭೆಯಲ್ಲಿ ಸಿಎಂ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿ.ಟಿ.ದೇವೇಗೌಡ, ಸಿಎಂ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ನಾನಾ, ನೀವಾ ನೋಡೇ ಬಿಡೋಣ  ಎಂದು ಸಿಎಂ ಸಿದ್ದರಾಮಯ್ಯಗೆ ಜಿಟಿ ದೇವೇಗೌಡ ಸವಾಲ್ ಹಾಕಿದ್ದಾರೆ. ನಾನು ಯಾವತ್ತೂ ಸಿಎಂ ವಿರುದ್ಧ ಮಾತನಾಡಿಲ್ಲ. ಚಾಮುಂಡೇಶ್ವರಿಯಲ್ಲಿ ಸೋತಾಗಲೂ ಗೌರವ ಕೊಟ್ಟಿದ್ದೇನೆ. ಸುಮ್ಮನೆ ಯಾಕೆ ನನ್ನನ್ನು ಕೆಣಕುತ್ತೀರಿ..? ನಾನು ಕಡಿದು ಕಟ್ಟೆ ಹಾಕಿದ್ದೇನೋ? ನೀವು ಕಡಿದು ಕಟ್ಟೆ ಹಾಕಿದ್ದೀರೋ ನೋಡೇ ಬಿಡೋಣ.ರಾಜೀನಾಮೆ ಕೊಟ್ಟು ಚುನಾವಣೆಗೆ ಬನ್ನಿ. ನಾನು ಗೆಲ್ತೀನೋ, ನೀವು ಗೆಲ್ತೀರೋ ನೋಡೋಣ ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಪಂಥಾಹ್ವಾನ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  Sumalatha: ಮಂಡ್ಯ ಗೌಡ್ತಿ ನಡೆ ಏನು..? ಮೈತ್ರಿ ಅಭ್ಯರ್ಥಿಗೆ ಬೆಂಬಲವೋ ? ಸ್ವತಂತ್ರ ಸ್ಪರ್ಧೆಯೋ?