Asianet Suvarna News Asianet Suvarna News

ಕೇಸರಿ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ದೃಷ್ಟಿ..! ಹೇಗಿರಲಿದೆ ‘ಲೋಕ’ಲ್ ಫೈಟ್..?

ಬಳ್ಳಾರಿಯಲ್ಲಿದ್ದಾರೆ ಕಾಂಗ್ರೆಸ್‌ನ 6 ಶಾಸಕರು..!
ಚಿಕ್ಕಬಳ್ಳಾಪುರದಲ್ಲಿ ಯಾರು ಬಿಜೆಪಿ ಅಭ್ಯರ್ಥಿ..!
ಯಾರಾಗ್ತಾರೆ ಕಲಬುರಗಿ ಜಿಲ್ಲೆಯ ಕಿಂಗ್..?
 

ಲೋಕಸಭಾ ಚುನಾವಣಾ ಕಾವು ಈಗಾಗಲೇ ದೇಶಾದ್ಯಂತ ಏರಿದೆ. ಕರ್ನಾಟಕದ (Karnataka) ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಕೂಡ ಗೆಲುವು ಸೋಲಿನ ಚರ್ಚೆ ಶುರುವಾಗಿದೆ. ಒಂದು ಕಡೆಯಲ್ಲಿ ಕಾಂಗ್ರೆಸ್(Congress) ಕರ್ನಾಟಕದಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ್ರೆ ಇನ್ನೊಂದು ಕಡೆಯಲ್ಲಿ ಬಿಜೆಪಿ(BJP) 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮವಾಗಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಕೈಲಿರೋ 8 ಕ್ಷೇತ್ರಗಳು ಕೈವಶವಾಗುವ ಆತಂಕವೂ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ(Loksabha) ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು ಬಳ್ಳಾರಿ. ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಶ್ರೀ ರಾಮುಲುಗೆ ಈ ಬಾರಿ ಹೈಕಮಾಂಡ್ ಅವಕಾಶ ಕೊಟ್ಟಿದೆ. ಹಾಗೇ ನೋಡಿದ್ರೆ ಬಳ್ಳಾರಿ ಕೂಡ ಬಿಜೆಪಿ ಹಿಡಿತದಲ್ಲೇ ಇರೋ ಲೋಕಸಭಾ ಕ್ಷೇತ್ರ. ದೇವೇಂದ್ರಪ್ಪ 2019 ರ ಚುನಾವಣೆಯಲ್ಲಿ ಗೆದ್ದಿದ್ದರು. ಆದ್ರೆ ಈ ಬಾರಿ ಬದಲಾವಣೆಯನ್ನ ಬಯಸಿದ ಮೋದಿ(Narendra Modi) ಅಮಿತ್ ಶಾ ರಾಮುಲುವನ್ನ ಗೆಲ್ಲಸಿಕೊಂಡು ಬರೋ ಲೆಕ್ಕಾಚಾರದಲ್ಲಿದೆ. ಶ್ರೀ ರಾಮುಲು ಕೂಡ ಗೆಲುವಿನ ವಿಶ್ವಾಸದಲ್ಲಿ ಇದ್ದಾರೆ.

ಇದನ್ನೂ ವೀಕ್ಷಿಸಿ:  ವಿಡಿಯೋ ನೋಡಿ: ಒಟ್ಟು 40 ದಿನ ನಡೆದಿದ್ದ 2019ರ ಲೋಕ ಸಮರ.. 2024ರ ಚುಣಾವಣೆ ಎಷ್ಟು ಹಂತದಲ್ಲಿ ನಡೆಯಲಿದೆ?