ವಿಡಿಯೋ ನೋಡಿ: ಒಟ್ಟು 40 ದಿನ ನಡೆದಿದ್ದ 2019ರ ಲೋಕ ಸಮರ.. 2024ರ ಚುಣಾವಣೆ ಎಷ್ಟು ಹಂತದಲ್ಲಿ ನಡೆಯಲಿದೆ?
ದೊಡ್ಡ ರಾಜ್ಯಗಳಲ್ಲಿ ಒಟ್ಟು ಎಷ್ಟು ಹಂತಗಳಲ್ಲಿ ನಡೆಯಲಿದೆ..?
ಈ ಬಾರಿಯೂ ಹೆಚ್ಚಲಿದೆಯಾ ಮತಗಟ್ಟೆಗೆ ಬರುವವರ ಸಂಖ್ಯೆ..?
ಈ ಚುನಾವಣೆಯಲ್ಲಿ ಆಗಲಿದೆಯಾ ಮಹಿಳಾ ಮತಗಳ ದಾಖಲೆ..?
2024ರ ಲೋಕಸಭಾ ಚುಣಾವಣೆಗೆ ಇಂದು ದಿನಾಂಕ ನಿಗದಿಯಾಗಿದೆ. ಕಳೆದ 2019ರ ಲೋಕಸಭಾ (Loksabha) ಚುನಾವಣೆ ಮಾರ್ಚ್ 10 ರಂದು ಅನೌನ್ಸ್ ಆಗಿತ್ತು. ಈ ಬಾರಿ ಐದು ಲೇಟಾಗಿ ಅನೌನ್ಸ್ ಆಗಿದೆ. 2019ರಲ್ಲಿ ನಡೆದ ಚುಣಾವಣೆ 17ನೇ ಲೋಕಸಭಾ ಚುನಾವಣೆಯಾಗಿತ್ತು. ಈಗ ನಡೆಯಬೇಕಿರುವುದು 18ನೇ ಲೋಕಸಭಾ ಚುನಾವಣೆ. ಹಿಂದಿನ ಎಲೆಕ್ಷನ್ ಡೇಟ್ ಅನೌನ್ಸ್‌ಗೆ ಹೋಲಿಸಿದರೆ ಈ ಬಾರಿ ಐದು ದಿನ ಲೇಟಾಗಿ ಚುನಾವಣೆ ದಿನಾಂಕವನ್ನು(Election Date) ಚುನಾವಣಾ ಆಯೋಗ ಘೋಷಿಸಿದೆ. ಮಾರ್ಚ್ 10 ರಂದು ಘೋಷಣೆಗೊಂಡಿದ್ದ 2019ರ ಲೋಕಸಭಾ ಚುನಾವಣೆ, ಏಪ್ರಿಲ್ 11 ರಿಂದ ಮೇ 19ರವರೆಗೂ ನಡೆದಿತ್ತು. ಅಂದ್ರೆ ಒಟ್ಟು 40 ದಿನಗಳ ಕಾಲ 2019ರ ಲೋಕಸಭಾ ಚುಣಾವಣೆ ನಡೆದಿತ್ತು. ಈ 40 ದಿನಗಳ ಕಾಲ ನಡೆದ ಚುಣಾವಣೆ ದೇಶಾದ್ಯಂತ ಒಟ್ಟು ಏಳು ಹಂತಗಳಲ್ಲಿ ನಡೆದಿತ್ತು. ಹಾಗೆಯೇ 2024ರ ಚುನಾವಣೆ ಸಹ ಇದೇ ಮಾದರಿಯಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ವೀಕ್ಷಿಸಿ: Bagalkot Crime: ಪ್ರೇಯಸಿಯ ತಂದೆ ಕತ್ತು ಸೀಳಿದ ಪ್ರೇಮಿ..! ಮಗಳ ಮೇಲೆ ಕಣ್ಣು ಹಾಕಬೇಡ ಅಂದಿದ್ದೇ ತಪ್ಪಾ..?