ಪತ್ರಕರ್ತರಿಗೆ ಕನ್ನಡ ಪಾಠ ಮಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ!
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪತ್ರಕರ್ತರಿಗೆ ಕನ್ನಡ ಪಾಠ ಮಾಡಿದ್ದು, ಭಾಷಾಂತರ ಮಾಡಿ ಗೊಂದಲ ಮಾಡದಂತೆ ಪಾಠ ಹೇಳಿದ್ದಾರೆ. ಕನ್ನಡದಲ್ಲಿ ಎಲ್ಲಾ ಶಬ್ದಗಳಿಗೆ ಅರ್ಥ ಹುಡುಕಬಾರದು. ಕೆಲವು ಶಬ್ದಗಳನ್ನು ತರ್ಜುಮೆ ಮಾಡಿದರೆ ಜನರಿಗೆ ಅರ್ಥ ಆಗಲ್ಲ. ಅದಕ್ಕಾಗಿಯೇ ಕುವೆಂಪು ಅವರು ಅನಗತ್ಯ ತರ್ಜುಮೆ ಬೇಡ ಎಂದು ಹೇಳಿದರು.
ಬೆಂಗಳೂರು, (ಆಗಸ್ಟ್.24):ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪತ್ರಕರ್ತರಿಗೆ ಕನ್ನಡ ಪಾಠ ಮಾಡಿದ್ದು, ಭಾಷಾಂತರ ಮಾಡಿ ಗೊಂದಲ ಮಾಡದಂತೆ ಪಾಠ ಹೇಳಿದ್ದಾರೆ. ಕನ್ನಡದಲ್ಲಿ ಎಲ್ಲಾ ಶಬ್ದಗಳಿಗೆ ಅರ್ಥ ಹುಡುಕಬಾರದು. ಕೆಲವು ಶಬ್ದಗಳನ್ನು ತರ್ಜುಮೆ ಮಾಡಿದರೆ ಜನರಿಗೆ ಅರ್ಥ ಆಗಲ್ಲ. ಅದಕ್ಕಾಗಿಯೇ ಕುವೆಂಪು ಅವರು ಅನಗತ್ಯ ತರ್ಜುಮೆ ಬೇಡ ಎಂದು ಹೇಳಿದರು.
ಸಿದ್ದುಗೆ ಹಿನ್ನಡೆ ಮಡಿಕೇರಿ ಚಲೋ ಯಾತ್ರೆ ರದ್ದು, ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ!
ಕೆಲವು ಶಬ್ದಗಳನ್ನು ಕನ್ನಡದಲ್ಲಿ ಹೇಳಿದರೆ ರಿಚ್ ಆಗಲ್ಲ. ಮಂಡಕ್ಕಿ ಅನ್ನೋದನ್ನು ಕನ್ನಡದಲ್ಲಿ ಹೇಳಬೇಕು. ಮಂಡಕ್ಕಿಯನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಬಾರದು. ಅದಕ್ಕಾಗಿಯೇ ಇಂಗ್ಲಿಷ್ ಶಬ್ದಗಳಿಗೆ ಉ ಕಾರ ಸೇರಿಸಿ ಹೇಳಿ ಅಂಯ ಕುವೆಂಪು ಹೇಳಿದ್ರು. ಬಸ್ಸು, ರೈಲು,ಕಾರು ಶಬ್ದವನ್ನು ಭಾಷಾಂತರ ಮಾಡಬಾರದು. ಅದನ್ನು ಉ ಕಾರ ಸೇರಿಸಿ ಉಚ್ಛರಿಸಬೇಕು ಎಂದು ಜರ್ನಲಿಸ್ಟ್‌ಗಳಿಗೆ ಕನ್ನಡ ಪಾಠ ಮಾಡಿದರು.