Watch Video:ಸಿಎಂ ಸ್ಥಾನದಿಂದ ನೇರವಾಗಿ ನಿವೃತ್ತಿ ಎಂದ ಸಿದ್ದು: ಸ್ವಕ್ಷೇತ್ರದ ಅಭ್ಯರ್ಥಿ ಸೋತರೆ, ಸಿಎಂ ಕುರ್ಚಿಗೆ ಕುತ್ತಿದೆಯಾ?
2013,2018, 2023.. ಈಗ ಮತ್ತೆ ನಿವೃತ್ತಿ ಮಾತು ರಿಪೀಟ್..?
ನಿವೃತ್ತಿ ಮಾತು ರಿಪೀಟ್ ಆಗ್ತಿರುವುದ ಹಿಂದಿನ ರಹಸ್ಯವೇನು..?
ಸಿಎಂ ಆಗಿ ಮುಂದುವರೆಯಲು ಹೆಚ್ಚು ಲೀಡ್ನಿಂದ ಗೆಲ್ಲಿಸಬೇಕಾ?
ಸಿಎಂ ಸಿದ್ದರಾಮಯ್ಯ ಸ್ವ-ಕ್ಷೇತ್ರದಲ್ಲಿ ಭರ್ಜರಿ ಎಲೆಕ್ಷನ್ ಪ್ರಚಾರ ಕೈಗೊಂಡಿದ್ದಾರೆ. ವರುಣಾದಲ್ಲಿ(Varuna), ಮೈಸೂರಿನಲ್ಲಿ ಸಿದ್ದರಾಮಯ್ಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ವರುಣಾದಲ್ಲಿ ಭಾವನಾತ್ಮಕವಾಗಿ ಮಾತ್ನಾಡಿದ್ದ ಸಿದ್ದು ಮೈಸೂರಿನಲ್ಲಿ(Mysore) ರಾಜಕೀಯ ನಿವೃತ್ತಿ ಬಗ್ಗೆ ಮಾತ್ನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ(Siddaramaiah) ಮತ್ತೊಮ್ಮೆ ರಾಜಕೀಯ ನಿವೃತ್ತಿ ಬಗ್ಗೆ ಮಾತ್ನಾಡಿದ್ದಾರೆ. ಈ ಅವಧಿ ನಂತರ ಚುನಾವಣೆಗೆ(Election) ಸ್ಪರ್ಧಿಸೋದಿಲ್ಲವೆಂದು ಸಿದ್ದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯವರು ನಿನ್ನೆ ವರುಣಾದಲ್ಲಿ ಎಲೆಕ್ಷನ್ ಪ್ರಚಾರದಲ್ಲಿದ್ರು. ಈ ಸಂದರ್ಭದಲ್ಲಿ ವರುಣಾ ಜನ ಮತ್ತೊಮ್ಮೆ ಎಲೆಕ್ಷನ್‌ಗೆ ನಿಲ್ಲಬೇಕೆಂದು ಕೇಳಿಕೊಂಡಿದ್ರು. ಈ ಪ್ರಶ್ನೆಗೆ ಪತ್ರಕರ್ತರು ಉತ್ತರ ಕೇಳಿದಾಗ ಸಿದ್ದರಾಮಯ್ಯವರು, ಮುಂದೆ ಬರುವ 2028ರ ವಿಧಾನಸಭಾ ಚುಣಾವಣೆಯಲ್ಲಿ ಸ್ಪರ್ಧಿಸೋದಿಲ್ಲವೆಂದು ಸಿದ್ದು ಹೇಳಿದ್ರು. ಮುಂದಿನ ವಿಧಾನಸಭೆ ಚುನಾವಣೆ ಬರೋದು 2028ರಲ್ಲಿ, ಆಗಾಗ್ಲೇ 82 ವರ್ಷವಾಗಿರುತ್ತೆ. ಶಕ್ತಿ ಇರೋದಿಲ್ಲ, ಉತ್ಸಾಹ ಇರೋದಿಲ್ಲ, ಕೆಲ್ಸ ಮಾಡೋದಕ್ಕೆ ಆಗೋದಿಲ್ಲ. ಹೀಗಾಗಿ ಇದೇ ನನ್ನ ಕೊನೆ ಅಧಿಕಾರ ಅವಧಿ. ಮುಂದಿನ ಚುನಾವಣೆಗೆ ನಾನು ಸ್ಪರ್ಧೆ ಮಾಡೋದಿಲ್ಲವೆಂದು ಸಿದ್ದರಾಮಯ್ಯನವರು ಮೈಸೂರಿನಲ್ಲಿ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಪ್ರೀತಿ ಹೆಸರಲ್ಲಿ ಅವಳು ಬ್ಲ್ಯಾಕ್‌ಮೇಲ್ ಮಾಡಿದ್ಲಾ..? ಅವಳನ್ನ ಮುಗಿಸಲು ಆತ ಬಳಸಿದ್ದು 45 ಸಿಮ್..60 ಮೊಬೈಲ್..!