ಪ್ರೀತಿ ಹೆಸರಲ್ಲಿ ಅವಳು ಬ್ಲ್ಯಾಕ್‌ಮೇಲ್ ಮಾಡಿದ್ಲಾ..? ಅವಳನ್ನ ಮುಗಿಸಲು ಆತ ಬಳಸಿದ್ದು 45 ಸಿಮ್..60 ಮೊಬೈಲ್..!
ಪ್ರೇಯಸಿಯನ್ನ ಕೊಂದು ಒಂದು ವರ್ಷ ಸೈಲೆಂಟಾಗಿಬಿಟ್ಟಿದ್ದ..!
ವರ್ಷದ ಹಿಂದಿನ ಕೇಸ್..ಈಗ ಪತ್ತೆ ಹಚ್ಚಿದ್ದೇಗೆ ಪೊಲೀಸರು..?
ಊಟಕ್ಕೆ ಕರೆದುಕೊಂಡು ಹೋದವನು ಹೆಣ ಹಾಕಿಬಿಟ್ಟನಾ..?
ಕೊಲೆಗಾರ ಎಷ್ಟೇ ಚಾಲಾಕಿ ಆಗಿದ್ರೂ ಆತ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಲೋಕೇ ಸಾಧ್ಯವೇ ಇಲ್ಲ. ಸರಿಯಾಗಿ ಒಂದು ವರ್ಷದ ಹಿಂದೆ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಸಿಕ್ಕಿತ್ತು. ಯಾರೋ ಮಹಿಳೆಯನ್ನ ಕೊಲೆ(Murder) ಮಾಡಿ ಶವಕ್ಕೆ ಕಲ್ಲು ಕಟ್ಟಿ ಬಿಸಾಡಿ ಹೋಗಿದ್ದರು. ಆದರೆ ಮಹಿಳೆಯ ಗುರುತು ಮಾತ್ರ ಪತ್ತೆಯಾಗಿರಲಿಲ್ಲ. ಹೀಗಾಗಿ ಆ ಕೇಸ್ ಹಾಗೇ ಪೆಂಡಿಂಗ್ ಉಳಿದುಕೊಂಡಿತ್ತು. ಆದ್ರೆ ವರ್ಷದ ನಂತರ ಇವತ್ತು ಆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಕೊಲೆಯಾದ ಒಂದು ವರ್ಷದ ನಂತರ ಕೊಲೆಯಾದವಳ ಸುಳಿವು ಸಿಕ್ಕಿದ್ದು ಆರೋಪಿ ಕೂಡಾ ಅಂದರ್ ಆಗಿದ್ದಾನೆ. ಈ ಕೇಸ್ ಪೊಲೀಸರನ್ನ ಹೈರಾಣಾಗಿಸಿದಂತೂ ಸತ್ಯ. ಸುಲ್ತಾನಾ ತಾಜ್ ಕೊಲೆ ರಹಸ್ಯವನ್ನ ಬೇಧಿಸಲು ಹೋದ ಪೊಲೀಸರಿಗೆ(Police) ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಆ್ಯಂಡ್ ಟರ್ನ್ ಎದುರಾಗ್ತಲೇ ಹೊಯ್ತು. ಆದ್ರೆ ಯಾವಾಗ ಸುಲ್ತಾನಾಳ ಮೊಬೈಲ್(Mobile) ಕರೆಗಳನ್ನ ಬೆನ್ನತ್ತಿ ಪೊಲೀಸರು ಹೋದ್ರೋ ಅವರಿಗೆ ಸಿಕ್ಕಿದ್ದು ಸಾದಿಕ್ ಪಾಷಾನ ಹೆಂಡತಿ. ಆಕೆ ಕೊಟ್ಟ ಮಾಹಿತಿ ಪೊಲೀಸರನ್ನ ಕೊಲೆಗಾರನ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸಿತ್ತು. ಕೊಲೆ ಕೇಸ್ ಬೆನ್ನತ್ತಿ ಹೋದ ಪೊಲೀಸರಿಗೆ ಸಾದಿಕ್ ಪಾಷಾನ ಹೆಂಡತಿ ಒಂದು ಸತ್ಯ ಹೆಳಿದಳು. ಅದೇನಂದ್ರೆ ಸುಲ್ತಾನಾ ಮತ್ತು ಅಬ್ರಾರ್ ಅನೈತಿಕ ಸಂಬಂಧ ಹೊಂದಿದ್ದರು. ಇದನ್ನ ಕೇಳಿದ ಪೊಲೀಸರು ಕೂಡಲೇ ಅಬ್ರಾರ್ನ ವಿಚಾರಣೆ ಮಾಡಿದ್ರು. ಆಗಲೇ ನೋಡಿ ಒಂದು ಡೆಡ್ಲಿ ಮರ್ಡರ್ ಕಹನಿಯನ್ನ ಅಬ್ರಾರ್ ಹೆಳೋದು. ಅನೈತಿಕ ಸಂಬಂಧ ಹೊಂದಿದ್ದ ಸುಲ್ತಾನಾ, ಅಬ್ರಾರ್ನ ಮತ್ತು ಆಕೆಯ ಖಾಸಗಿ ವಿಡಿಯೋಗಳನ್ನ ಇಟ್ಟುಕೊಂಡಿದ್ಲು. ನಂತರ ಇದೇ ವಿಡಿಯೋಗಳನ್ನ ಇಟ್ಟುಕೊಂಡು ಆತನನ್ನ ಬ್ಲ್ಯಾಕ್ ಮೇಲ್ ಮಾಡೋದಕ್ಕೆ ಶುರು ಮಾಡಿದ್ಲು. ಆದ್ರೆ ಕೊಡುವಷ್ಟು ಕೊಟ್ಟ ಅಬ್ರಾರ್ ನಂತರ ಆಕೆಯನ್ನ ಮುಗಿಸಲು ಪ್ಲ್ಯಾನ್ ಮಾಡ್ತಾನೆ.
ಇದನ್ನೂ ವೀಕ್ಷಿಸಿ: Turning Point: ಬಾಬ್ರಿ ಮಸೀದಿ ಗುಂಬಾಜ್ ಒಡೆದಾಗ ಮೌನವಾಗಿದ್ದೇಕೆ ನರಸಿಂಹ ರಾವ್ ? ಆ ನಿರ್ಣಯ ದೇಶದ ದಿಕ್ಕು ಬದಲಿಸಿತ್ತಾ ?