Who is this ಈಶ್ವರಪ್ಪ..? ನನಗೆ ಅವನ ಸರ್ಟಿಫಿಕೇಟ್ ಬೇಕಿಲ್ರೀ...
ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಏನೂ ಸಾಧನೆ ಮಾಡಿಲ್ಲ ಅಂತಾ ಸಚಿವ ಈಶ್ವರಪ್ಪ ಟೀಕೆಗೆ, ಸಿದ್ದು ಗುದ್ದು ಹೊಡೆದಿದ್ದಾರೆ.
ಬೆಂಗಳೂರು (ಫೆ. 11): ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಏನೂ ಸಾಧನೆ ಮಾಡಿಲ್ಲ ಅಂತಾ ಸಚಿವ ಈಶ್ವರಪ್ಪ ಟೀಕೆಗೆ, ಸಿದ್ದು ಗುದ್ದು ಹೊಡೆದಿದ್ದಾರೆ. 'ನಾನು ಸಿಎಂ ಆಗಿದ್ದಾಗ ಯಾವ ರೀತಿ ಅಭಿವೃದ್ಧಿ ಮಾಡಿದ್ದೇನೆ ಅಂಥ ರಾಜ್ಯದ ಜನರಿಗೆ ಗೊತ್ತಿದೆ. Who is this ಈಶ್ವರಪ್ಪ..? ನನಗೆ ಈಶ್ವರಪ್ಪನ ಸರ್ಟಿಫಿಕೇಟ್ ಬೇಕಾಗಿಲ್ಲ. ಐ ಡೋಂಟ್ ಕೇರ್ ಈಶ್ವರಪ್ಪ..ಎಂದು ವ್ಯಂಗ್ಯವಾಡಿದ್ದಾರೆ.
'ಹಿಂದ' ಹೋರಾಟ ನಡೆಯುವ ಬಗ್ಗೆ ಸಿದ್ದು ಸ್ಪಷ್ಟನೆ, ಉಲ್ಟಾ ಹೊಡೆದ ಲೆಕ್ಕಾಚಾರ..!
ಇನ್ನು ಎಸ್‌ಟಿ ಮೀಸಲು ಹೋರಾಟದ ಬಗ್ಗೆಯೂ ಮಾತನಾಡಿದ್ದಾರೆ. 'ಈಶ್ವರಪ್ಪರನ್ನ ಆರ್ ಎಸ್ ಎಸ್ ನವರು ಎತ್ತಿ ಕಟ್ಟಿ ಎಸ್ ಟಿ ಮೀಸಲು ಹೋರಾಟ ಮಾಡಿಸುತ್ತಿದ್ದಾರೆ. ಎಸ್ ಟಿ ಮೀಸಲು ಹೋರಾಟದಲ್ಲಿ ನಾನು ರಾಜಕೀಯ ಮಾಡಲ್ಲ' ಎಂದಿದ್ದಾರೆ.