ಭತ್ತದ ಕಣಜದಿಂದಲೇ ರಾಜ್ಯಕ್ಕೆ ಬರಲಿದ್ಯಾ ಟನ್‌ಗಟ್ಟಲೆ ಅಕ್ಕಿ?: "ಭಗವಂತ"ನ ಅಭಯ, ಈ ಕಾಳಗದಲ್ಲಿ ಗೆದ್ದರಾ ಸಿದ್ದು?
ಗ್ಯಾರಂಟಿ ಜಾರಿಗೊಳಿಸಲು ಸಿದ್ದು ಮುಂದೆ ನೂರೆಂಟು ಚಾಲೆಂಜ್!
ಕಾಂಗ್ರೆಸ್ Vs ಬಿಜೆಪಿ.. ರಾಜ್ಯದಲ್ಲಿ ಜೋರಾಯ್ತು ಅಕ್ಕಿ ರಾಜಕೀಯ!
ಕೈ-ಕಮಲ ಮಧ್ಯೆ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದ ಅಕ್ಕಿ ಕಾಳಗ!
ಅಕ್ಕಿ ಚಕ್ರವ್ಯೂಹದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಗವಂತನ ಅಕ್ಕಿ ಅಭಯ. ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆ ಅನ್ನೋ ಮಾತಿದೆ. ಆದರೆ ಇಲ್ಲಿ ರಾಜ್ಯ ಸರ್ಕಾರಕ್ಕೆ ಸಿಕ್ಕಿರೋದು ಬರೀ ಹುಲ್ಲು ಕಡ್ಡಿಯಲ್ಲ, ಆನೆಯನ್ನೇ ಕಟ್ಟಿ ಹಾಕೋ ಶಕ್ತಿಯಿರೋ ಹಗ್ಗ. ಹಾಗಾದ್ರೆ ಜುಲೈ ಒಂದಕ್ಕೆ ಅನ್ನಭಾಗ್ಯ ಯೋಜನೆ ಶುರುವಾಗೋದು ಗ್ಯಾರಂಟಿನಾ? ಅಕ್ಕಿ ಎಲ್ಲಿಂದ ತರ್ತಾರೆ ಅನ್ನೋ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರ ಕಂಡುಕೊಂಡಿದ್ದಾರೆ. ರಾಜಕೀಯ ಚಕ್ರವ್ಯೂಹವನ್ನು ಭೇದಿಸಿ 2ನೇ ಬಾರಿ ರಾಜ್ಯದ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿರೋ ಸಿದ್ದರಾಮಯ್ಯನವರ ಮುಂದೆ ಅಕ್ಕಿ ಚಕ್ರವ್ಯೂಹ. ಅನ್ನರಾಮಯ್ಯ ಖ್ಯಾತಿಯ ಸಿದ್ದರಾಮಯ್ಯನವರನ್ನು ಕ್ಷಣ ಕ್ಷಣಕ್ಕೂ ಹೆಜ್ಜೆ ಹೆಜ್ಜೆಗೂ ಕಾಡ್ತಿರೋ ಚಕ್ರವ್ಯೂಹವಿದೆ. ತಿಂಗಳಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಡ್ತೀವಿ ಅನ್ನೋದು ಕಾಂಗ್ರೆಸ್‌ನ ಚುನಾವಣಾ ಗ್ಯಾರಂಟಿ. ಆದ್ರೆ ಆ ಗ್ಯಾರಂಟಿಯನ್ನು ಅನುಷ್ಠಾನಗೊಳಿಸಲು ನಿಂತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಹತ್ತಾರು ವಿಘ್ನ, ನೂರೆಂಟು ಅಡ್ಡಿ ಬರುತ್ತಿದೆ.
ಇದನ್ನೂ ವೀಕ್ಷಿಸಿ: ಪರಿಷತ್ ತೆರವಾದ 3 ಸ್ಥಾನಕ್ಕೆ ಚುನಾವಣೆ: ಜಾತಿ ಲೆಕ್ಕಾಚಾರದಲ್ಲಿ 'ಕೈ' ಟಿಕೆಟ್ ಘೋಷಣೆ ಮಾಡ್ತಾ ?