ಪರಿಷತ್‌ ತೆರವಾದ 3 ಸ್ಥಾನಕ್ಕೆ ಚುನಾವಣೆ: ಜಾತಿ ಲೆಕ್ಕಾಚಾರದಲ್ಲಿ 'ಕೈ' ಟಿಕೆಟ್‌ ಘೋಷಣೆ ಮಾಡ್ತಾ ?

ವಿಧಾನಪರಿಷತ್‌ನ ಮೂರು ಸ್ಥಾನಕ್ಕೆ ಇಂದು ಕಾಂಗ್ರೆಸ್‌ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ. ಮೂರು ಪ್ರಮುಖ ಸಮುದಾಯಗಳಿಗೆ ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ನೀಡಿದೆ. 
 

First Published Jun 20, 2023, 11:22 AM IST | Last Updated Jun 20, 2023, 11:25 AM IST

ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ಜೂನ್ 30ರಂದು ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷವು ಸೋಮವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಿಜೆಪಿ ತ್ಯಜಿಸಿ ಕಾಂಗ್ರೆಸ್‌​​ಗೆ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ಜಗದೀಶ ಶೆಟ್ಟರ್‌ಗೆ ಟಿಕೆಟ್ ನೀಡಲಾಗಿದೆ.ಜೊತೆಗೆ ಎನ್‌ಎಸ್ ಬೋಸರಾಜು, ತಿಪ್ಪಣ್ಣ ಕಮಕನೂರ್​ ಅವರಿಗೂ ಟಿಕೆಟ್​​ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಇಲ್ಲಿ ಪ್ರಮುಖ ಮೂರು ಸಮುದಾಯದ ನಾಯಕರಿಗೆ ಟಿಕೆಟ್ ನೀಡಿದೆ ಎನ್ನಲಾಗ್ತಿದೆ. ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟಿಕೊಂಡು ಟಿಕೆಟ್‌ ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. 

ಇದನ್ನೂ ವೀಕ್ಷಿಸಿ: ಉತ್ತರ ಕರ್ನಾಟಕ ಭಾಗದಲ್ಲಿ ಬರಗಾಲದ ಪರಿಸ್ಥಿತಿ: ಕುಡಿಯುವ ನೀರಿಗೂ ಹಾಹಾಕಾರ..!

Video Top Stories