ಕೊಪ್ಪಳ ಪಂಚ ಕ್ಷೇತ್ರಗಳಿಗೆ ಕೈ ಟಿಕೆಟ್ ಅನೌನ್ಸ್: ಸಿದ್ದು ನಿರ್ಧಾರಕ್ಕೆ ಕಾಂಗ್ರೆಸ್ ಕಂಪನ

ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಭಾರೀ ಸಂಚಲನ ಮೂಡಿಸಿದೆ.

First Published Nov 22, 2022, 4:21 PM IST | Last Updated Nov 22, 2022, 4:21 PM IST

ರಾಜ್ಯ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿಯಿದ್ದು,  ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಿದೆ.  ಕಾಂಗ್ರೆಸ್'ನಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ಬೇಕು ಅಂದ್ರೆ ಮೊದ್ಲು ಅರ್ಜಿ ಹಾಕ್ಬೇಕು, ನಂತ್ರ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುತ್ತೆ. ಇದು ಕಾಂಗ್ರೆಸ್ ಸಂಪ್ರದಾಯ. ಆದ್ರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮದುವೆ ಮನೆಯಲ್ಲೇ ಟಿಕೆಟ್ ಘೋಷಣೆ ಮಾಡಿ ಬಿಟ್ಟಿದ್ದಾರೆ. ಈ ಮೂಲಕ ಪಂಚ ಕ್ಷೇತ್ರಗಳಿಗೆ ಟಿಕೆಟ್ ಪಂಚ್ ಕೊಟ್ಟಿದ್ದಾರೆ. ಇದರಿಂದ ಕೈ ಕೋಟೆಯಲ್ಲಿ ಸಂಚಲನ ಶುರುವಾಗಿದೆ.

ಮತದಾರರ ಪಟ್ಟಿ ಡಿಲೀಟ್‌ ಪ್ರಕರಣ ತನಿಖೆಗೆ ಆಗಮಿಸಿದ ಕೇಂದ್ರ ತಂಡ