Asianet Suvarna News Asianet Suvarna News

News Hour: ಲೋಕಸಭೆ ಸಮರಕ್ಕೂ ಮುನ್ನವೇ ‘ರಾಜ್ಯ’ಸಭೆ ಬ್ಯಾಟಲ್

ಲೋಕಸಭೆ ಚುನಾವಣೆ ಸಮರ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ಕದನ ಜೋರಾಗಿದೆ. ನಾಲ್ಕು ಸ್ಥಾನಕ್ಕೆ ಐವರ ಹಣಾಹಣಿ ಇದ್ದು, ಗೆದ್ದು ಬೀಗೋದ್ಯಾರು ಎನ್ನುವ ಕುತೂಹಲ ಆರಂಭವಾಗಿದೆ.

ಬೆಂಗಳೂರು (ಫೆ.26): ಲೋಕಸಭೆ ಸಮರಕ್ಕೂ ಮುನ್ನವೇ ರಾಜ್ಯಸಭೆ ಚುನಾವಣೆ ನಡೆಯುತ್ತಿದೆ. ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳ ಹಣಾಹಣಿ ನಡೆಯಲಿದೆ. ಮೇಲ್ಮನೆ ಮೇಲಾಟಕ್ಕೆ ನಾಳೆಯೇ ಮಹಾ ಕ್ಲೈಮ್ಯಾಕ್ಸ್ ತಿಳಿಯಲಿದೆ.

ಮೂರು ಪಕ್ಷಗಳು ಎರಡು ರಣತಂತ್ರ ಹಣೆದಿದ್ದು, ಗೆಲುವಿನ ಒಂದೇ ಲೆಕ್ಕಾಚಾರದಲ್ಲಿದೆ. 3 ಪಕ್ಷಗಳ ಶಾಸಕರನ್ನ ಹಿಡಿದಿಟ್ಟುಕೊಳ್ಳಲೂ ವಿಪ್ ಅಸ್ತ್ರ ಈಗಾಗಲೇ ಪ್ರಯೋಗಿಸಲಾಗಿದೆ. ಮೂರು ಪಕ್ಷಕ್ಕೂ ಶುರುವಾಗಿದೆ ಅಡ್ಡಮತದಾನ ಭೀತಿ ಕೂಡ ಶುರುವಾಗಿದೆ.

Rajyasabha Election: ದೋಸ್ತಿಗೆ ತಿರುಮಂತ್ರ ಹಾಕಲು ಕೈ ಪ್ಲ್ಯಾನ್.. ನಡೆಯುತ್ತಾ ಅಡ್ಡ ಮತದಾನ..?

ಸಂಜೆ ಹಿಲ್ಟನ್ ಹೋಟೆಲ್​ನಲ್ಲಿ ಕಾಂಗ್ರೆಸ್​ ಶಾಸಕಾಂಗ ಸಭೆ ನಡೆದಿದೆ. ನಾಳೆ ಮತ ಹಾಕುವ ಬಗ್ಗೆ ಶಾಸಕರಿಗೆ ಅಣಕು ಪ್ರದರ್ಶನ ನೀಡಲಾಗಿದೆ. ಮತ ಅಸಿಂಧುವಾಗದಂತೆ ಕಾಂಗ್ರೆಸ್ಸಿಗರು ಎಚ್ಚರಿಕೆಯ ನಡೆ ಇಟ್ಟಿದೆ.

Video Top Stories