ಒಕ್ಕಲಿಗರ ಮತ ಸೆಳೆಯಲು ಬಿಜೆಪಿ ಪ್ಲಾನ್: ಇದುವೇ 'ನಮೋ' ಕೆಂಪೇಗೌಡ ಅಸ್ತ್ರ
ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಹಾಗೂ ಥೀಮ್ ಪಾರ್ಕ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಬಿಜೆಪಿ ಪ್ಲಾನ್ ಮಾಡಿದೆ.
ರಾಜ್ಯದಲ್ಲಿ ಎರಡು ಬಾರಿಯೂ ಬಹುಮತ ಪಡೆಯಲು ಬಿಜೆಪಿಗೆ ಅಡ್ಡಗಾಲಾಗಿದ್ದು ಹಳೇ ಮೈಸೂರು ಭಾಗ. ಈ ಭಾಗದ 56 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿರೋದು ಕೇವಲ 12 ಕ್ಷೇತ್ರಗಳಲ್ಲಿ ಮಾತ್ರ. ಹಾಗಾಗಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರಗಳಲ್ಲಿ ಮತಬೇಟೆಗೆ ಒಕ್ಕಲಿಗರ ಅಸ್ಮಿತೆ ಅಸ್ತ್ರವನ್ನೇ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಮೋ ಕೆಂಪೇಗೌಡ ಅಸ್ತ್ರ ಹೂಡಲಾಗಿದೆ.
ಪಿಎಫ್‌ಐನಿಂದ ಕರ್ನಾಟದಲ್ಲಿ 9 ಕೋಟಿ ದೇಣಿಗೆ ಸಂಗ್ರಹ: ಪೊಲೀಸ್ ತನಿಖೆಯಲ್ಲಿ ಬಹಿರಂಗ